ದಾವಣಗೆರೆ: ತಾಲ್ಲೂಕಿನ ಮಾಯಕೊಂಡದ ಮಾರುತಿ ವೈನ್ ಶಾಪ್ ನಲ್ಲಿ ಕಳ್ಳತನವಾಗಿದ್ದು, ಕಳ್ಳರು ಮದ್ಯದ ಜತೆಗೆ ಸಾಕ್ಷಿಗೆ ಇದ್ದ ಸಿಸಿಟಿವಿ ಡಿವಿಆರ್ ಕಳವು ಮಾಡಿದ್ದಾರೆ.
ವೈನ್ ಮಾಲೀಕ ಮಳಲಕೆರೆಯ ಜಿ.ಎ. ನಾಗನಗೌಡ ಮತ್ತು ಕೆಲಸಗಾರ ಎಂದಿನಂತೆ ರಾತ್ರಿ ಬಾಗಿಲು ಹಾಕಿ, ಮನೆಗೆ ಹೋಗಿದ್ದಾರೆ. ಕಳ್ಳರು ಶಾಪ್ ನ ಹಿಂದಿನ ಗೋಡೆ ಒಡೆದು ಮದ್ಯ ಬಾಕ್ಸ್ ಗಳನ್ನು ಕಳ್ಳತನ ಮಾಡಿದ್ದಾರೆ. ಮದ್ಯದ ಜತೆ ಸಿಸಿಟಿವಿ ಡಿವಿಆರ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



