ದಾವಣಗೆರೆ: ಡೆಲ್ಲಿ ಪೊಲೀಸ್ ಹೆಸರಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮಾತು ನಂಬಿ ನಗರದ ವೈದ್ಯರೊಬ್ಬರು 5.50 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ. ನಿಮ್ಮ ಖಾತೆಯಲ್ಲಿ 8.5 ಕೊಟಿ ಅಕ್ರಮ ಹಣ ವರ್ಗಾವಣೆ ಆಗಿದೆ. ನಿಮ್ಮ ಮೇಲೆ ಅರೆಸ್ಟ್ ವಾರೆಂಟ್ ಇದೆ ಎಂದು ನಂಬಿಸಿ ಎಲ್ಲಾ ಖಾತೆ ಹಣ ಒಂದೆ ಖಾತೆ ಹಾಕಿಸಿಕೊಂಡು ವಂಚಿಸಿದ್ದಾರೆ.
ಮೊದಲು ನಾವು ಡೆಲ್ಲಿ ಕಸ್ಟಮ್ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ ಎಂದು ಪರಿಚಯಿಸಿಕೊಂಡರು. ನಿಮ್ಮ ಹೆಸರಿನಲ್ಲಿ ಒಂದು ಪಾರ್ಸಲ್ ಮೇಲೇಷಿಯಾದ ಕೊಲಲಾಂಪುರಕ್ಕೆ ಹೋಗುತ್ತಿದ್ದು, ಅದರಲ್ಲಿ 58 ಡೆಬಿಟ್ ಕಾರ್ಡ್, 16 ಪಾಸ್ ಪೋರ್ಟ್ಸ್‌ಗಳು ಇದ್ದು, ನಿಮ್ಮನ್ನು ವಿಚಾರಣೆಗೆಒಳಪಡಿಸಬೇಕು ಎಂದರು. ನಂತರ ಡೆಲ್ಲಿ ಪೊಲೀಸ್ ಆದರ್ ಮಿತ್ರಾ ಎಂದು ಹೇಳಿಕೊಂಡ ವ್ಯಕ್ತಿ ವಾಟ್ಸಾಪ್ ಕರೆ ಮಾಡಿ ಮಾತನಾಡಿದ್ದು, ನನ್ನ ಆಧಾರ್ ಕಾರ್ಡ್‌ನಲ್ಲಿ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂದು ಪರಿಶೀಲಿಸಲು ಸಿಬ್ಬಂದಿಗಳಿಗೆ ತಿಳಿಸಿ, ನಿಮ್ಮಹೆಸರಿನಲ್ಲಿ ಐಸಿಐಸಿ ಬ್ಯಾಕ್‌ನಲ್ಲಿ ಆಕೌಂಟ್ ಇದ್ದು,ಅದರಲ್ಲಿ 8.5 ಕೋಟಿ ರೂ ಹಣ ವರ್ಗಾವಣೆ ಆಗಿದ್ದು, ಇದನ್ನು ಅಮಿತ್ ಚೌಧರಿ ಎಂಬ ವ್ಯಕ್ತಿ ಮನಿ ಲಾಂಡರಿಂಗ್ ಕೇಸಿನಲ್ಲಿ ಬ್ಲಾಕ್ ಮಾಡಿರುತ್ತಾರೆಂದು ಹೇಳಿ, ಅರೆಸ್ಟ್ ವಾರೆಂಟ್ ಇ ಕಳುಹಿಸಲು ಸಿಬ್ಬಂದಿಗಳಿಗೆ ಸೂಚಿಸಿದರು.
ನಂತರ ಮಾಡಿದ ಆದ ಮಿತ್ರಾ ಅವರು, ಈ ಪ್ರಕರಣದಲ್ಲಿ ಒಟ್ಟು 257 ಜನರಿದ್ದು, ನೀವು 160 ವ್ಯಕ್ತಿಯಾಗಿದ್ದೀರಿ. ಆದ್ಯತಾ ನಿಧಿಯ ತನಿಖೆ ನಡೆಸಿದರೆ ಹೊರಬರಬಹುದು. ಡಾಕ್ಟರ್ ಆಗಿರುವುದರಿಂದ ನಿಮಗೆ ಸಹಾಯಮಾಡುತ್ತೇವೆ ಎಂದು ಹೇಳಿ, ನಿಮ್ಮ ಎಲ್ಲಾ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಒಂದು ಕಡೆ
ಹಾಕಿಕೊಂಡು ನಾವು ಹೇಳುವ ಖಾತೆಗೆ ಹಣಕಳುಹಿಸಿದರೆ ಆರ್.ಬಿ.ಐ ಅವರು ಪರಿಶೀಲಿಸಿ ನೀವು ನಿರಪರಾಧಿಯಾಗಿದ್ದರೆ ನಿಮ್ಮ ಹಣ ವಾಪಾಸ್‌ಬರುತ್ತದೆ ಎಂದು ತಿಳಿಸಿದ್ದಾರೆ. ಅವರು ಕಳುಹಿಸಿ ಖಾತೆಗೆ 5,50,000 ರೂ ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ನ್ಯಾಷನಲ್ ಸಿಕ್ರೇಟ್ ಆಕ್ಟ್ ಪ್ರಕಾರ ನೀವು ಹಣ ಹಾಕಿರುವ ವಿಚಾರವನ್ನು ಯಾರಿಗೂ ಹೇಳಬಾರದು.ಹೇಳಿದರೆ ನಿಮಗೆ ತೊಂದರೆಯಾಗುತ್ತದೆ ಎಂದ ಹೇಳಿದರು. ಸ್ವಲ್ಪ ದಿನದ ನಂತರ ಇದು ಯಾರೋ ಅಪರಿಚಿತರಿಂದ ವಂಚನೆ ನಡೆದಿದೆ ಎಂದು ತಿಳಿದಿದೆ ಎಂದು ನಗರ ವೈದ್ಯರೊಬ್ಬರು ಸಿಇಎನ್ ಅಪರಾಧ
ಠಾಣೆಯಲ್ಲಿ ನೀಡಿರುವ ದೂರಿಲ್ಲಿ ತಿಳಿಸಿದ್ದಾರೆ.