ದಾವಣಗೆರೆ: ಮನೆ ಪೇಂಟ್ ಗೆ ಬಂದಿದ್ದ ಮೇಸ್ತ್ರೀ 1 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಸುಮಾರು 1 ಲಕ್ಷ ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ.
ಧವನ್ ಕಾಲೇಜ್ ಆಡಳಿತಾಧಿಕಾರಿ ಡಾ. ಅಂಜು ಅವರು ತಂದೆ ಪಿಜೆ ಬಡಾವಣೆ ಮನೆಯಲ್ಲಿ ಮಗನನ್ನು ಸ್ನಾನ ಮಾಡಿಸುವಾಗ ಮನೆಯ ಬಾತ್ ರೂಂ ಬಳಿ ಸೆಲ್ಪ್ ಮೇಲೆ 02 ಬಂಗಾರದ ಬಳೆಗಳು ಮತ್ತು 01 ಒಂದು ಎಳೆಯ ಸರವನ್ನು (ಒಟ್ಟು 25 ಗ್ರಾಂ ತೂಕದ ಬಂಗಾರದ ಆಭರಣಗಳು) ಇಟ್ಟಿದ್ದರು.
ಅದೇ ದಿನ ಪೇಂಟ್ ಕೆಲಸಕ್ಕೆ ಬಂದಿದ್ದ ಪೇಂಟ್ ಮೇಸ್ತ್ರೀ ರಾಮಚಂದ್ರ ಆರ್ ಈತನು ಮನೆಯ ಮಾಲೀಕರಿಂದ ಬೀಗದ ಕೀ ಪಡೆದುಕೊಂಡು ಪೇಂಟ್ ಮಾಡುವ ನೆಪದಲ್ಲಿ ಮನೆಯ ಬಾತ್ ರೂಂ ಸೆಲ್ಪ್ ಮೇಲೆ ಇಟ್ಟಿದ್ದ ಮೇಲ್ಕಂಡ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಆರೋಪಿತರ ಪತ್ತೆಗಾಗಿ ಅಪರಾಧ ವಿಭಾಗದ ಸಿಬ್ಬಂದಿ ನೇಮಿಸಿ, ಪೇಂಟ್ ಮೇಸ್ತ್ರೀ ರಾಮಚಂದ್ರ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಗಿತ್ತು. ಪೇಂಟ್ ಕೆಲಸಕ್ಕೆ ಹೋದಾಗ ಮನೆಯ ಬಾತ್ ರೂಂ ಸೆಲ್ಪ್ ಮೇಲೆ ಇಟ್ಟಿದ್ದ 02 ಬಂಗಾರದ ಬಳೆಗಳು ಮತ್ತು 01 ಒಂದು ಎಳೆಯ ಸರವನ್ನು ಕಳ್ಳತನ ಮಾಡಿದ್ದು, ಹಳೇ ಬಾತಿ ಮುತ್ತೂಟ್ ಮನಿ ಅಮಿಟೆಡ್ ನಲ್ಲಿ ಅಡವಿಟ್ಟಿದ್ಸಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 18 ಗ್ರಾಮ ತೂಕದ 01 ಲಕ್ಷ ಮೌಲ್ಯದ ಬಂಗಾರದ ಒಡವೆ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ್ ಎಂ ಸಂತೋಷ್ ಮತ್ತು ಮಂಜುನಾಥ ಜಿ ಹಾಗೂ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಮ್.ಆರ್ ಚೌಬೆ, ಪಿಎಸ್‌ಐ ನಾಗರಾಜಪ್ಪ ಬಿ.ಆರ್ ಸಿಬ್ಬಂಧಿಗಳಾದ ಬಸವರಾಜಪ್ಪ ಆರ್, ಕೆಂಚಪ್ಪ, ಬಸವರಾಜ್, ಧೃವ, ಗೀತಾ ಹೆಚ್ ಒಳಗೊಂಡ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



