ದಾವಣಗೆರೆ: ಬಾರ್‌ವೊಂದರಲ್ಲಿ ಸ್ನೇಹಿತನೊಂದಿಗೆ ಕುಳಿತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಶನಿವಾರ ಸಂಜೆ ಕೆಟಿಜೆ ನಗರದಲ್ಲಿರುವ ಪ್ರಕಾಶ್ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಕುಮಾರ್(36) ಕೊಲೆಯಾದ ವ್ಯಕ್ತಿ. ತನ್ನ ಸ್ನೇಹಿತರ ಜೊತೆ ಕುಳಿತಿದ್ದ ಕುಮಾರ್‌ನಿಗೆ ಹಿಂದಿನಿದ ಬಂದ ಗೌತಮ್(38) ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕೆಟಿಜೆ ನಗರ ಪೊಲೀಸರು ಇರಿತಕ್ಕೆ ಒಳಗಾದ ಕುಮಾರನನ್ನು ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಕುಮಾರ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.