Connect with us

Dvgsuddi Kannada | online news portal | Kannada news online

ದಾವಣಗೆರೆ: ಧಾರ್ಮಿಕ ಪ್ರಚೋದಕಾರಿ ಪೋಸ್ಟ್ ಹಾಕಿದವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು

ದಾವಣಗೆರೆ

ದಾವಣಗೆರೆ: ಧಾರ್ಮಿಕ ಪ್ರಚೋದಕಾರಿ ಪೋಸ್ಟ್ ಹಾಕಿದವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು

ದಾವಣಗೆರೆ: ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಪ್ರಚೋದನೆ ಪೋಸ್ಟ್ ಹಾಕಿದವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣವನ್ನು ಜಿಲ್ಲಾ ಪೊಲೀಸರು ದಾಖಲಿಸಿದ್ದಾರೆ.

ಪ್ರಕರಣ – 01: ದಿನಾಂಕ:16.09.2024ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಒಂದು ಕೋಮಿನ ಸಮಾಜದ ಯುವಕರು ಹಸಿರು ಬಾವುಟವನ್ನು ದಾವಣಗೆರೆ ಆಹ್ಮದ್ ನಗರದ 3ನೇ ಮತ್ತು 4ನೇ ಕ್ರಾಸ್ ನ ಮಧ್ಯದಲ್ಲಿ ಸ್ಥಾಪಿಸಿರುವ ಏರ್ಟೆಲ್ ಟವರ್ ಮೇಲೆ ಕಟ್ಟಿದ್ದು ಇದನ್ನು ನೋಡಿದ ದಾವಣಗೆರೆ ನಗರ, ಗಾಂಧಿನಗರ 2ನೇ ಕ್ರಾಸ್ ನೇ ವಾಸಿ ಪ್ರಜ್ವಲ್ ಎಂಬುವವರು ರವರು ಉದ್ದೇಶ ಪೂರ್ವಕವಾಗಿ ದಿನಾಂಕ:15.09.2024ರಂದು ಬೆಳಿಗ್ಗೆ 10-00 ಗಂಟೆಗೆ ಸದರಿ ಏರ್ಟೆಲ್ ಟವರ್ ನ್ನು ಹತ್ತಿ ಹಸಿರು ಬಾವುಟದ ಮೇಲೆ ಭಗಧ್ವಜವನ್ನು ಕಟ್ಟಿ ಸದರಿ ಏರಟೆಲ್ ಟವರ್ ಗೆ ಕಟ್ಟಿದ ಭಗಧ್ವಜವನ್ನು ತನ್ನ ಮೊಬೈಲ್ ಚಿತ್ರಿಕರಿಸಿ ಸಾಮಾಜಿಕ ಜಾಲ ತಾಣ (Instagram) ದಲ್ಲಿ ಹಾಕಿ ಇನ್ನೊಂದು ಕೋಮಿನ ಸಮಾಜದ ಭಾವನೆಗಳನ್ನು ಕೆರಳಿಸುವ ಹಾಗೂ ಆ ಕೋಮಿನ ಜನರನ್ನು ಉತ್ತೇಜಿಸಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಕೋಮು ಹಿಂಸೆ ಮಾಡಲು ಪ್ರೇರೇಪಿಸಿದ್ದರ ಬಗ್ಗೆ ಪ್ರಜ್ವಲ್ ರವರ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣ -02; ದಿನಾಂಕ:16.09.2024ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಒಂದು ಕೋಮಿನ ಸಮಾಜದ ಯುವಕರು ಹಸಿರು ಬಾವುಟವನ್ನು ದಾವಣಗೆರೆ ಆಹ್ಮದ್ ನಗರದ 3ನೇ ಮತ್ತು 4ನೇ ಕ್ರಾಸ್ ನ ಮಧ್ಯದಲ್ಲಿ ಸ್ಥಾಪಿಸಿರುವ ಏರ್ಟೆಲ್ ಟವ‌ರ್ ಮೇಲೆ ಕಟ್ಟಿದ್ದು, ಇದನ್ನು ನೋಡಿದ ದಾವಣಗೆರೆ ನಗರ, ಎಸ್ ಪಿ ಎಸ್ ನಗರ ವಾಸಿ ಗಣೇಶ @ ಕ್ರಾಕ್ ಗಣಿ ಎಂಬುವರು ಉದ್ದೇಶ ಪೂರ್ವಕವಾಗಿ ದಿನಾಂಕ:15.09.2024ರಂದು ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆ ಮಧ್ಯದ ಅವಧಿಯಲ್ಲಿ ಸದರಿ ಏರ್ಟೆಲ್ ಟವರ್ ನ್ನು ಹತ್ತಿ ಹಸಿರು ಬಾವುಟದ ಮೇಲೆ ಭಗಧ್ವಜವನ್ನು ಕಟ್ಟಲು ಏರುತ್ತಿರುವುದನ್ನು ಮೊಬೈಲ್ ನಿಂದ ಚಿತ್ರಿಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ (instagram) ಹಾಕಿ ಇನ್ನೊಂದು ಕೋಮಿನ ಸಮಾಜದ ಭಾವನೆಗಳನ್ನು ಕೆರಳಿಸುವ ಹಾಗೂ ಆ ಕೋಮಿನ ಜನರನ್ನು ಉತ್ತೇಜಿಸಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಕೋಮು ಹಿಂಸೆ ಮಾಡಲು ಪ್ರೇರೆಪಿಸಿದ್ದರಿಂದ ಗಣೇಶ @ ಕ್ರಾಕ್ ಗಣಿ ರವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ಸಾರ್ವಜನಿಕರಿಗೆ ಸೂಚನೆ: ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆಂದರೆ , ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ನಿಂದನೆ, ಕೋಮು ಪ್ರಚೋದನಕಾರಿ, ಸುಳ್ಳು ಸುದ್ದಿಗಳನ್ನು, ವ್ಯಕ್ತಿ ನಿಂದನೆ ಪೋಸ್ಟ್ ಗಳನ್ನು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದರಲ್ಲೂ ಯುವಕರು, ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮುಂಚೆ ಹೆಚ್ಚು ಜಾಗರೂಕತೆ ವಹಿಸಬೇಕು ಈ ಬಗ್ಗೆ ಪೋಷಕರುಗಳು ತಮ್ಮ ತಮ್ಮ ಮಕ್ಕಳಿಗೆ ಹಾಗೂ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಉಪನ್ಯಾಸಕರುಗಳು ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಬಗ್ಗೆ ಹಾಗೂ ಪೋಸ್ಟ್ ಮಾಡುವ ಮುಂಚೆ ಜಾಗರೂಕತೆ ವಹಿಸುವ ಬಗ್ಗೆ ಸೂಕ್ತ ತಿಳಿವಳಿಕೆ ನೀಡುವುದು.

ಈಗಾಗಲೇ ಪೊಲೀಸ್ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕತೆ ವಹಿಸುವ ಬಗ್ಗೆ ಹಾಗೂ ಕಾನೂನು ಬಾಹಿರವಾಗಿ ಮೇಲ್ಕಾಣಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಎದುರಿಬೇಕಾಗುವ ಕಾನೂನು ಕ್ರಮಗಳ ಬಗ್ಗೆ ಜಾಗರೂಕತೆ ಮೂಡಿಸಲಾಗುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top