Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಮಾನ ಇಟ್ಟ ಚಿನ್ನ ಬಿಡಿಸಲು ಬಂದವರೇ ಚಿನ್ನ ದೋಚಿ ಎಸ್ಕೇಪ್; ಇಬ್ಬರ ಬಂಧನ; 9 ಲಕ್ಷ ಮೌಲ್ಯದ ಚಿನ್ನ ವಶ

ದಾವಣಗೆರೆ

ದಾವಣಗೆರೆ: ಅಡಮಾನ ಇಟ್ಟ ಚಿನ್ನ ಬಿಡಿಸಲು ಬಂದವರೇ ಚಿನ್ನ ದೋಚಿ ಎಸ್ಕೇಪ್; ಇಬ್ಬರ ಬಂಧನ; 9 ಲಕ್ಷ ಮೌಲ್ಯದ ಚಿನ್ನ ವಶ

ದಾವಣಗೆರೆ: ಅಡಮಾನ ಇಟ್ಟ ಚಿನ್ನ ಆಭರಣ ಬಿಡಿಸುಲು ಬ್ಯಾಂಕಿಗೆ ಬಂದು, ಆಭರಣ ನೋಡಲು ಪಡೆದು ಚಿನ್ನದ ಜತೆ ಎಸ್ಕೇಪ್ ಆದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ‌ ಮಾಡಿದ್ದಾರೆ. ಆರೋಪಿಗಳಿಂದ 09 ಲಕ್ಷ ಮೌಲ್ಯದ ಆಭರಣಗಳು ವಶಕ್ಕೆ ಪಡೆಯಲಾಗಿದೆ.

ಅಜಯ್ ಕಂಚಿಕೇರಿ ಎಂಬುವವನು ದಾವಣಗೆರೆ ನಗರದ ಫೆಡರಲ್ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಯ್ಯ ಹೆಬ್ಬಳ್ಳಿಮಠ ಎಂಬುವವರ ಬಳಿ ಬಂದು, ನಾವು ಇಂಡಲ್ ಮನಿ ಎನ್.ಬಿ.ಎಫ್.ಸಿ. ಯಲ್ಲಿ ಬಂಗಾರದ ಅಡಮಾನ ಇಟ್ಟು ಸಾಲ ಪಡೆದಿದ್ದೇನೆ. ಅಲ್ಲಿ ಬಡ್ಡಿ ಜಾಸ್ತಿ ಇದ್ದುದರಿಂದ ಆ ಸಾಲದ ಖಾತೆಯನ್ನು ನಿಮ್ಮ ಬ್ಯಾಂಕಿಗೆ ಟೇಕ್ ಓವರ್ ಮಾಡಿಕೊಳ್ಳಿ ಎಂದು ಹೇಳಿ ನಂಬಿಸಿ ಫೆಡರಲ್ ಬ್ಯಾಂಕಿನಲ್ಲಿ ಎಸ್.ಬಿ. ಖಾತೆ ತೆರೆದು, ಆ ಖಾತೆಗೆ ಸದರಿ ಫೆಡರಲ್ ಬ್ಯಾಂಕಿನಿಂದ ರೂ.7,20,000-00 ಜಮೆ ಮಾಡಿಸಿಕೊಂಡು ಸದರಿ ಹಣವನ್ನು ಇಂಡಲ್ ಮನಿ ಎನ್.ಬಿ.ಎಫ್.ಸಿ.ಯ ಸಾಲದ ಖಾತೆಗೆ ಜಮಾ ಮಾಡಿಸಿದ್ದಾನೆ. ನಂತರ ಅದೇ ದಿನ ದಿನಾಂಕ:06-09-2024 ರಂದು ಬೆಳಿಗ್ಗೆ 11-30 ಗಂಟೆಗೆ ಮ್ಯಾನೇಜರ್ ಮಲ್ಲಯ್ಯ ಹೆಬ್ಬಳ್ಳಿಮಠ ಹಾಗೂ ಅವರ ಸಿಬ್ಬಂದಿಯು ಅಜಯ್ ಕಂಚಿಕೇರಿ ಅವರೊಂದಿಗೆ ಇಂಡಲ್ ಮನಿ ಎನ್.ಬಿ.ಎಫ್.ಸಿ.ಯಲ್ಲಿ ಬಂಗಾರವನ್ನು ತಮ್ಮ ವಶಕ್ಕೆ ಪಡೆಯಲುಬಹೋಗಿದ್ದರು.

ಆಗ ಅಜಯ್ ಕಂಚಿಕೇರಿ ಅವರು ಅಡಮಾನ ಮಾಡಿದ್ದ ಒಡವೆಗಳನ್ನು ಪಡೆದುಕೊಂಡಿದ್ದು ಅವರ ಜೊತೆ ಕರೆದುಕೊಂಡು ಬಂದಿದ್ದ ಅಜಯ್ ಎಂಬ ಇನ್ನೊಬ್ಬ ವ್ಯಕ್ತಿಯು ಆ ಒಡವೆಗಳನ್ನು ನೋಡುವುದಾಗಿ ಹೇಳಿ ಅಜಯ್ ಕಂಚಿಕೇರಿ ಇವರಿಂದ ಪಡೆದುಕೊಂಡು ಒಡವೆಗಳನ್ನು ಮ್ಯಾನೇಜರ್ ಇವರಿಗೆ ವಾಪಸ್ ಕೊಡದೇ ಅಲ್ಲಿಂದ ಓಡಿ ಹೋಗಿದ್ದಾನೆ. ಈ ಬಗ್ಗೆ ಮ್ಯಾನೇಜರ್ ಇವರು ಅಜಯ್ ಕಂಚಿಕೇರಿ ಹಾಗೂ ಅಜಯ್ ಕುಮಾರ ಎಂಬುವವರ ಮೇಲೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿತರು ಮತ್ತು ಬಂಗಾರದ ಆಭರಣಗಳನ್ನು ಪತ್ತೆ ಮಾಡಲು ಹೆಚ್ಚುವರಿ ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ & ಮಂಜುನಾಥ ಹಾಗೂ ಡಿವೈ ಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜು ನೇತೃತ್ವದಲ್ಲಿ, ಪಿಎಸ್ ಐ ಜಿ. ನಾಗರಾಜ ಮತ್ತು ಸಿಬ್ಬಂದಿ ಫಕೃದ್ದೀನ್ ಅಲಿ., ಬಿ.ಪಿ. ಗಿರೀಶ, ಸುರೇಶ ಅವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಆರೋಪಿ ಮತ್ತು ಮಾಲಿನ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿತ್ತು.

ಈ ತಂಡವು ಮೇಲ್ಕಂಡ ಪ್ರಕರಣದ ಆರೋಪಿ ಅಜಯ್ ಕಂಚಿಕೆರೆ ಹಾಗು ಅಜಯ್ ಕುಮಾರ ಬಂಧಿಸಿದ್ದು, ಆರೋಪಿತರುಗಳಿಂದ ಸುಮಾರು 9,00,000 ರೂ. ಬೆಲೆಯ 161 ಗ್ರಾಂ. ನ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top