ದಾವಣಗೆರೆ: ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಪರ ಸ್ತ್ರೀಯೊಂದಿಗೆ ಲವ್ವಿಡವ್ವಿಯಲ್ಲಿ ಮುಳುಗಿದ್ದ ಪೊಲೀಸ್ ಕಾನ್ಸ್ಸ್ಟೇಬಲ್ ನ ನ್ನು ಎಸ್ಪಿ ಉಮಾ ಪ್ರಶಾಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಸಿ ಪ್ರಸನ್ನ ಟಿ. ಅಮಾನತಾದ ಪೇದೆ. ಪತ್ನಿಯಿಂದ ದೂರು ಪಡೆದ ನಂತರ ಹಿರಿಯ ಅಧಿಕಾರಿಗಳಿಂದ ತನಿಖೆ ಮಾಡಿಸಿ ಆರೋಪ ಸತ್ಯವೆಂದು ಗೊತ್ತಾದ ಬಳಿಕ ಅಮಾನತುಗೊಳಿಸಿದ್ದಾರೆ.
ಪರಸ್ತ್ರೀ ಜೊತೆ ಸೇರಿ ಕೆಲ ತಿಂಗಳಿಂದ ಮನೆಗೆ ಬರುವುದನ್ನೇ ಪೇದೆ ಪ್ರಸನ್ನ ನಿಲ್ಲಿಸಿದ್ದ. ಒಂದು ಗಂಡು, ಒಂದು ಹೆಣ್ಣು ಮಗಳೊಂದಿಗೆ ಕುಟುಂಬ ನಡೆಸಲು ಪತ್ನಿ ಪರದಾಡುತ್ತಿದ್ದರು. ಮತ್ತೊಬ್ಬಳೊಂದಿಗೆ ಓಡಾಟ ಪ್ರಶ್ನೆ ಮಾಡಿದಕ್ಕೆ ಪತ್ನಿಯ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಲ್ಲೆಮಾಡಿದ್ದ. ಆತನ ದೌರ್ಜನ್ಯದಿಂದ ಬೇಸತ್ತು ಪತ್ನಿ ದೂರು ನೀಡಿದ್ದರು. ಈ ಹಿನ್ನಲೆ ಹಿರಿಯ ಅಧಿಕಾರಿಗಳಿಂದ ಎಸ್ಪಿ ತನಿಖೆ ಮಾಡಿಸಿದ್ದರು. ಆರೋಪ ಸಾಬೀತು ಆದ ಹಿನ್ನೆಲೆ ಈ ಕ್ರಮಕೈಗೊಳ್ಳಲಾಗಿದೆ.



