ದಾವಣಗೆರೆ: ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿದ್ದ 18,400 ರೂಪಾಯಿ ಮೌಲ್ಯದ ಪಡಿತರ ರಾಗಿಯನ್ನು ಹರಿಹರ ನಗರ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಹರಿಹರದ ಸ್ಟಾರ್ ಟ್ರೇರ‍್ಸ್ ಮಾಲಿಕ ಸಯ್ಯದ್ ತಾಜುದ್ದೀನ್ ಬಂಧಿಸಲಾಗಿದೆ.
ಹರಿಹರ ನಗರದ ಗೌಸಿಯಾ ಕಾಲೋನಿಯಲ್ಲಿ ಸುರೇಶ್ ಎಂಬುವರ ಹಂಚಿನ ಮನೆಯನ್ನು ಬಾಡಿಗೆ ಪಡೆದುಕೊಂಡು ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ವಿತರಣೆಸುವ ರಾಗಿ ಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಣೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹರಿಹರ ನಗರ ಪೊಲೀಸ್ ಹಾಗೂ ಆಹಾರ ನಿರೀಕ್ಷಕ ಎಂ. ನಜರುಲ್ಲಾ ದಾಳಿ ನಡೆಸಿ ಒಟ್ಟು 920 ಕೆಜಿ ರಾಗಿ ( ಬೆಲೆ 18,400) ವಶಪಡಿಸಿಕೊಂಡಿದ್ದಾರೆ.ಮೇಲ್ನೋಟಕ್ಕೆ ಅಕ್ರಮ ದಾಸ್ತಾನು ಎಂದು ಪರಿಗಣಿಸಿ ಸಯ್ಯದ್ ತಾಜುದ್ದೀನ್ ವಿರುದ್ದ ಆಹಾರ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.