ದಾವಣಗೆರೆ: ಫೆಬ್ರವರಿ 28ರಂದು ನಮ್ಮದೇ ಜನಾಂಗದ ಯುವತಿಯನ್ನು ಮದುವೆ ಆಗಿದ್ದು, ಮಾವನ ಮನೆಯವರು ಬಲವಂತವಾಗಿ ನನ್ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ನ್ಯಾಯ ಒದಗಿಸಬೇಕು ಎಂದು ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಯುವಕ ಎಸ್. ಶಿವರಾಜ್ ಆಗ್ರಹಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮದುವೆಯಾಗಿ ವಿವಾಹ ನೋಂದಣಿ ಕಚೇರಿಗೆ ಹೋದಾಗ ಯುವತಿಯ ಮನೆಯವರು ಬಲವಂತವಾಗಿ ನನ್ನ ಪತ್ನಿಯನ್ನು ಎಳೆದು ಕೊಂಡು ಹೋಗಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ದೊರೆಯಿತು. ನಂತರ ಅಲ್ಲಿಗೆ ಹೋದಾಗ ಅಲ್ಲಿನ ಪೊಲೀಸರು ನನ್ನ ವಿರುದ್ಧವೇ ಪೊಲೀಸರು ವಿಚಾರಣೆ ನಡೆಸಿ, ನನ್ನ ವಿರುದ್ದವೇ ಹರಿಹಾಯ್ದರು. ಹುಡುಗಿಯನ್ನು ಬಿಟ್ಟು ಬಿಡುವಂತೆ ಹೇಳಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ನನಗೆ ನ್ಯಾಯ ಕೊಡಬೇಕು. ನನ್ನ ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಿ ಕೊಡಬೇಕೆಂದು ಎಂದು ಒತ್ತಾಯಿಸಿದರು.



