ದಾವಣಗೆರೆ: ಪಾನ್ ಮಸಾಲಾ ಅಂಗಡಿ ಬಾಗಿಲು ಮುರಿದು ಸುಪರ್, ವಿಮಲ್, ತಂಬಾಕು ಕಳ್ಳತನ ಮಾಡಿದ ಆರೋಪಿಗಳ ಸಹಿತ 18,000 ರೂ. ಮೌಲ್ಯದ ಪಾನ್ ಮಸಾಲಾ ಹಾಗೂ 50,000 ಮೌಲ್ಯದ 02 ಬೈಕ್ ವಶಕ್ಕೆ ಪಡೆಯಲಾಗಿದೆ.
ನಗರದ ಎಂ ಜಿ ರಸ್ತೆಯಲ್ಲಿರುವ SCS ಟ್ರೇಡರ್ಸ್ ಅಂಗಡಿಯ ಮೇಲೆ ಗೋಡಾಮಿನಲ್ಲಿದ್ದ 1) ಡಾಗ್ ಸುಪರ್ ಪಾನ್ ಮಾಸಾಲ ಬೆಲೆ 49800/- ರೂ 2) 2 ಡಾಗ್ ವಿಮಲ್ ಪಾನ್ ಮಸಾಲಾ ಬೆಲೆ 50200/- ರೂಗಳು ಹಾಗು 3) ಒಂದು ಚೀಲ RR ತಂಬಾಕು ಬೆಲೆ 20700/- ರೂ ಇದನ್ನು ಯಾರೋ ಕಳ್ಳರು ಗೋಡಾಮ್ ಬಾಗಿಲು ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಬಸವನಗರ ಪೊಲೀಸ್ ಠಾಣೆಯಲ್ಲಿ ವ್ಯಾಪಾರ ಹಿಮಾಂತ್ ರಾಜ್ ಎಸ್ (42) ದೂರು ನೀಡಿದ್ದರು.
ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲು ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಜಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡ ಆರೋಪಿ ಮತ್ತು ಮಾಲಿನ ಪತ್ತೆ ಕಾರ್ಯವನ್ನು ಕೈಗೊಂಡಿದ್ದು ರಾತ್ರಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡುವಾಗ ಅನುಮಾನಾಸ್ಪದವಾಗಿ ಬೈಕ್ ಗಳಲ್ಲಿ ತಿರುಗಾಡುತ್ತಿದ್ದ ಆರೋಪಿಗಳಾದ ಮಹಮ್ಮದ್ ಅಲಿ ಹಾಗೂ 03 ಜನರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅವರು ದಾವಣಗೆರೆ ಎಂ ಜಿ ರಸ್ತೆಯಲ್ಲಿರುವ SCS ಟ್ರೇಡರ್ಸ್ ಅಂಗಡಿಯ ಮೇಲೆ ಗೋಡಾಮಿನಲ್ಲಿ ಮಾರಟಕ್ಕಿಟ್ಟಿದ್ದ ಸುಪರ್, ವಿಮಲ್ ಪಾನಮಸಾಲಾ ಹಾಗೂ RR ತಂಬಾಕನ್ನು ಚೀಲವನ್ನು ಕಳ್ಳತನ ಮಾಡಿದ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ. ಕಳ್ಳತನ ಮಾಡಿದ ಮಾಲಿನ ಬಾಪ್ತು 18000/- ರೂ ಬೆಲೆಯ ಸುಪರ್, ವಿಮಲ್ ಪಾನಮಸಾಲಾ ಹಾಗೂ RR ತಂಬಾಕನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ 50,000/- ರೂ ಬೆಲೆ ಬಾಳುವ 02 ಮೊಟರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



