ದಾವಣಗೆರೆ: ಕಾನೂನು ಬಾಹಿರವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1.30 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ SS ಹೈಟೆಕ್ ಬಡಾವಣೆಯ ರಸ್ತೆಯಲ್ಲಿ ಜೂ.17ರಂದು ಕಾನೂನು ಬಾಹಿರವಾಗಿ ಯುವಕರು ಬೈಕ್ ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಎಎಸ್ಪಿಗಳಾದ ವಿಜಯ ಕುಮಾರ ಎಂ ಸಂತೋಷ, ಮಂಜುನಾಥ ಜಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹಾಗೂ ಸಿಬ್ಬಂದಿ ಒಳಗೊಂಡ ತಂಡವು ಸ್ಥಳಕ್ಕೆ ದಾಳಿ ಮಾಡಿ ಕಾನೂನು ಬಾಹಿರವಾಗಿ ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುವ ಸಲುವಾಗಿ ನಿಂತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ 01) ಮಹಮದ್ ಅಜ್ಗರ್, ಸುಮಾರು : 23ವರ್ಷ, ವಾಸ : ಚಿತ್ರದುರ್ಗ ಟೌನ್, 02) ಸುಭಾನ್ ವುಲ್ಲಾ @ ಶಾಹೀದ್ ಅಫ್ರೀದಿ, ಸುಮಾರು :20ವರ್ಷ, ಮರ ಕೊರೆಯುವ ಕೆಲಸ, ವಾಸ:ಚೇಳಗುಡ್ಡ, ಚಿತ್ರದುರ್ಗ ಟೌನ್ , 3) ಜಾಫರ್ ಸಾಧಿಕ್, ಸುಮಾರು :24 ವರ್ಷ, ಮೋಟರ್ ರಿವೈಡಿಂಗ್ ಕೆಲಸ, ವಾಸ: ಚೇಳಗುಡ್ಡ, ಚಿತ್ರದುರ್ಗ ಟೌನ್ ಇವರನ್ನು ಬಂಧಿಸಲಾಗಿದೆ. ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಸುಮಾರು 1,30,000/- ( ಒಂದು ಲಕ್ಷ ಮೂವತ್ತು ಸಾವಿರ) ಬೆಲೆ ಬಾಳುವ 1250 ಗ್ರಾಂ ಗಾಂಜಾವನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲಿಸ್ ಅಧಿಕಾರಿಗಳಾದ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ , ಸಿಬ್ಬಂದಿಗಳಾದ ಎಎಸ್ಐ ಈರಣ್ಣ, ಹರೀಶ ನಾಯ್ಕ, ಪುರುಷೋತ್ತಮ, ಮಂಜಪ್ಪ, ಶಿವರಾಜ, ಹರೀಶ ಅವರನೊಳಗೊಂಡ ತಂಡಕ್ಕೆ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



