ದಾವಣಗೆರೆ: ಕಳುವಾದ 90 ಮೌಲ್ಯದ ಎರಡು ಎತ್ತು, ಕೃತ್ಯಕ್ಕೆ ಬಳಸಿದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕತಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಚಿನ್ನಗಿರಿ ಉಪ ವಿಭಾಗದ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ. ದಿನಾಂಕ: 14-06-2024 ರಂದು ಹೊನ್ನಾಳಿ ತಾಲೂಕ್ ಚೀಲಾಪುರ ಗ್ರಾಮದ ವಾಸಿ ಧರ್ಮನಾಯ್ಕ ಠಾಣೆಗೆ ಹಾಜರಾಗಿ, ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಟ್ಟಿದ್ದ ಸುಮಾರು 90.000/- ರೂ. ಬೆಲೆ ಬಾಳುವ ಒಂದು ಜೊತೆ ಎತ್ತುಗಳನ್ನು (ಎರಡು ಎತ್ತುಗಳು) ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ನೀಡಿದ್ದರ ಮೇರೆಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲೆ, ದಾವಣಗೆರೆ, ಪೊಲೀಸ್ ಉಪಾಧೀಕ್ಷಕರು, ಚನ್ನಗಿರಿ ಉಪ ವಿಭಾಗ, ಚನ್ನಗಿರಿ ರವರ ಮಾರ್ಗದರ್ಶನದಲ್ಲಿ ಹೊನ್ನಾಳಿ ನಿರೀಕ್ಷಕರಮ ಸುನೀಲ್ ಕುಮಾರ್ ಹೆಚ್ ಎಸ್ ನೇತೃತ್ವದ ತಂಡವು ದಿನಾಂಕ: 16-06-2024 ರಂದು ಮಧ್ಯಾಹ್ನ ಸಮಯದಲ್ಲಿ ಹೊನ್ನಾಳಿ ತಾಲ್ಲೂಕ್ ಗೊಲರಹಳ್ಳಿ, ಗ್ರಾಮದ ಬಸವಪಟ್ಟಣ ಕ್ರಾಸ್ ನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಹಾಕಿದ್ದ ಚೆಕ್ ಪೋಸ್ಟ್ ಬಳಿ ದನಗಳನ್ನು ತುಂಬಿಕೊಂಡು ಬಂದ ಗೂಡ್ಸ್ ವಾಹನ ನಿಲ್ಲಿಸಿದ್ದಾಗ, ಚಾಲಕ ಇಳಿದು ಓಡಿ ಹೋಗಲು ಪ್ರಯತ್ನಿಸಿದನು. ಹಿಡಿದು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದೇ ಮೇಲೆ ಅನುಮಾನ ಬರುವ ರೀತಿ ನಡೆದುಕೊಂಡಿದ್ದಾನೆ.
ಈ ವೇಳೆ ಆರೋಪಿ ಮಹಮ್ಮದ್ ಆಸೀಫ್ @ ಆಶಿದ್ (29)ಗೂಡ್ಸ್ ವಾಹನ ಚಾಲಕ, ಚೀಲಾಪುರ ಗ್ರಾಮ ಹೊನ್ನಾಳಿ ತಾ ಅಂತ ತಿಳಿಸಿದ್ದರಿಂದ ಗೂಡ್ಸ್ ವಾಹನದಲ್ಲಿರುವ ಎತ್ತುಗಳು ಕಳ್ಳತನವಾಗಿರುವ ಮಾಲು ಅಂತ ಅನುಮಾನ ಬಂದಿದ್ದರಿಂದ ಕೂಡಲೇ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೇಲ್ಕಂಡ ಪ್ರಕರಣದಲ್ಲಿ ಕಳವು ಆಗಿರುವ ಎತ್ತುಗಳು ಆಗಿದ್ದು, ಕಳ್ಳತನ ಮಾಡಿಕೊಂಡು ತಂದಿರುವುದು ಅಂತ ಬೆಳಕಿಗೆ ಬಂದಿದೆ. ಆರೋಪಿ ಮಹಮ್ಮದ್ ಆಸೀಫ್ ಈತನ ಬಳಿ ದೊರೆತ ಕೆಎ-41/ಸಿ-6984 ನೇ ಗೂಡ್ಸ್ ವಾಹನ (ಅಂದಾಜು 3 ಲಕ್ಷ ಮೌಲ್ಯ) ಮತ್ತು ಅಂದಾಜು ಮೊತ್ತ 90 ಸಾವಿರ ರೂ ಮೌಲ್ಯದ ಒಂದು ಜೊತೆ ಎತ್ತುಗಳನ್ನು ( ಎರಡು ಎತ್ತುಗಳು) ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಸಲಾಗಿದೆ. ಪತ್ತೆಯಾದ ಎತ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಎತ್ತುಗಳ ವಾರಸುದಾರರ ವಶಕ್ಕೆ ನೀಡಲಾಗಿದೆ.
ಮೇಲ್ಕಂಡ ಪ್ರಕರಣದಲ್ಲಿ ಕಳ್ಳತನವಾದ ಎತ್ತುಗಳನ್ನು ಪತ್ತೆ ಮಾಡಿ, ಆರೋಪಿತನನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹೊನ್ನಾಳಿ ನಿರೀಕ್ಷಕ ಸುನೀಲ್ ಕುಮಾರ್ ಹೆಚ್ ಎಸ್, ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ, ತಿಪ್ಪೇಸ್ವಾಮಿ ಟಿ, ಹರೀಶ್ ಎ,ಎಸ್,ಐ, ರವಿ ಎನ್. ಚೇತನ್ ಕುಮಾರ್, ಮಂಜುನಾಥ, ಪ್ರಸನ್ನ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.