ದಾವಣಗೆರೆ: ಅಕ್ರಮವಾಗಿ ಗಾಂಜಾ ಗಿಡ ಬೆಳೆದ ಆರೋಪಿ ಬಂಧಿಸಲಾಗಿದ್ದು, ಆರೋಪಿಯಿಂದ ಸುಮಾರು 75 ಸಾವಿರ ಮೌಲ್ಯದ ಗಾಂಜಾ ಸೊಪ್ಪು ವಶಕ್ಕೆ ಪಡೆಯಲಾಗಿದೆ.
ಜೂ. 7ರಂದು ಮಧ್ಯಾಹ್ನ ಸಮಯದಲ್ಲಿ ಜಗಳೂರು ತಾಲ್ಲೂಕು ಅಸಗೋಡು ಗ್ರಾಮದಲ್ಲಿ ನಾಗರಾಜ್ (28) ತನ್ನ ಮನೆ ಮುಂದೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಗ್ರಾ. ಉಪ ವಿಭಾಗದ ಡಿವೈಎಸ್ಪಿ ಪ್ರಶಾಂತ್ ಸಿದ್ದನ ಗೌಡರ್ ಮಾರ್ಗದರ್ಶನದಲ್ಲಿ ಬಿಳಿಚೋಡು ಪೊಲೀಸ್ ಠಾಣೆಯ ಪಿಎಸ್ಐ ಓಂಕಾರಿನಾಯ್ಕ ಹಾಗೂ ಸಿಬ್ಬಂದಿಗಳ ತಂಡ ದಾಳಿ ಮಾಡಿ, ಕಾನೂನು ಬಾಹಿರವಾಗಿ ಗಾಂಜಾ ಸೊಪ್ಪನ್ನು ಬೆಳೆದಿದ್ದ ಆರೋಪಿತ ನಾಗರಾಜ್ ಬಂಧನ ಮಾಡಲಾಗಿದೆ.
ಸುಮಾರು 75 ಸಾವಿರ ಮೌಲ್ಯದ 3 ಕೆಜಿ ಕ್ಕಿಂತ ಹೆಚ್ಚು ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ದಾಳಿಯಲ್ಲಿ ಬಿಳಿಚೋಡು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷರಾದ ಓಂಕಾರಿನಾಯ್ಕ, ಕೆ ಹಾಗೂ ಸಿಬ್ಬಂದಿಗಳಾದ ಆರ್.ಎ.ಕೃಷ್ಣಮೂರ್ತಿ, ಪಿ. ತಿಪ್ಪೇಸ್ವಾಮಿ, ಜಿ.ಜೆ ಬಸವರಾಜ, ರಾಜು ಕೊಡವರ ಲೋಕೇಶ, ಮಹಾತೇಶ, ಎಸ್ ಅಶೋಕ ಭಾಗವಹಿಸಿದ್ದರು. ತಮಡಕ್ಕೆ ಪೊಲೀಸ್ ಅಧೀಕ್ಷಕ್ಷಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ್ ಹಾಗೂ ಜಿ ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.