ದಾವಣಗೆರೆ: ಕಲ್ಯಾಣ ಮಂಟಪಗಳ ರೂಮ್ ಕೀ ಮುರಿದು ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 67,000/-ರೂ ಬೆಲೆಯ 10.5 ಗ್ರಾಂ ತೂಕದ ಬಂಗಾರದ ಆಭರಣ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮೇ. 20 ರಂದು ಬೆಂಗಳೂರು ನಿವಾಸಿ ಸೌಮ್ಯ ಎಂಬುವವರು ದಾವಣಗೆರೆ ಕೆಇಬಿ ನೌಕರರ ಸಮುಧಾಯ ಭವನದಲ್ಲಿ ತಮ್ಮ
ಸಂಬಧಿಕರ ಮದುವೆಗೆ ಬಂದಿದ್ದು, ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ತಂಗಿದ್ದ ರೂಮಿನ ಬೀಗ ಹಾಕಿಕೊಂಡು ಮದುವೆ ಹಾಲ್‌ಗೆ ಹೋಗಿದ್ದರು. ಈ ವೇಳೆ ಯಾರೋ ಕಳ್ಳರು ರೂಮಿನ
ಬೀಗ ಮುರಿದು ಬಟ್ಟೆ ಬ್ಯಾಗಿನಲ್ಲಿ ಇಟ್ಟಿದ್ದ 12.5 ಗ್ರಾಂ ತೂಕದ ಬಂಗಾರದ ಆಭರಣ ಹಾಗು 3500/- ರೂ . ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಕೆಟಿಜೆ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಆರೋಪಿತ ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ನಿರೀಕ್ಷಕ ಸುನಿಲ್ ಕುಮಾರ್ ಹೆಚ್ ಎಸ್ ಹಾಗು ಪಿಎಸ್‌ಐ ಸಾಗರ ಅತ್ತರವಾಲಾ, ಎನ್.ಆರ್ ಕಾಟೆ ಹಾಗು ಸಿಬ್ಬಂದಿಗಳಾದ ಶಂಕರ್ ಜಾಧವ್, ಪ್ರಕಾಶ ಟಿ, ಎಮ್ ಮಂಜಪ್ಪ, ಶಿವರಾಜ್ ಎಮ್ ಎಸ್, ವೀರೇಶ ಕುಮಾರ ಹಾಗೂ ಪಿಸಿ ಗೀತಾ ಸಿ ಕೆ ಅವರನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಮೇಲ್ಕಂಡ ಪ್ರಕರಣದ ಆರೋಪಿ ಶಾಂತಿ ನಗರ ವಾಸಿ ಕಿರಣ ನಾಯ್ಕ ಬಂಧಿಸಲಾಗಿದೆ. ಆರೋಪಿತನಿಂದ ಒಟ್ಟು 67,000/-ರೂ ಬೆಲೆಯ 10.5 ಗ್ರಾಂ ತೂಕದ ಬಂಗಾರದ ಆಭರಣ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ವಿರುದ್ಧ ಈಗಾಗಲೇ ವಿದ್ಯಾ ನಗರ ಪೊಲೀಸ್ ಠಾಣೆ, ಬಡಾವಣೆ ಠಾಣೆ ಹಾಗೂಬಸವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುತ್ತವೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿವ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.