ದಾವಣಗೆರೆ: ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹಿರಿಯ ನಾಗರಿಕರಿಗೆ ATM ಗಳಲ್ಲಿ ಹಣ ಬಿಡಿಸಲು ಸಹಾಯ ಮಾಡುವ ನೆಪದಲ್ಲಿ ಬರೋಬ್ಬರಿ 8.58 ಲಕ್ಷ ವಂಚನೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ.
ಜಿಲ್ಲೆಯ ಮುಚ್ಚುನೂರು ಗ್ರಾಮದ ಹಿರಿಯ ನಾಗರಿಕ ಪಾಪಣ್ಣ (75) ದಾವಣಗೆರೆಯ ಮಂಡಿಪೇಟೆಯ ಎಸ್ ಬಿಐ ಎಟಿಎಂ ನಲ್ಲಿ ಹಣ ಬಿಡಿಸಲು ಹೋಗಿದ್ದಾಗ ಅಪರಿಚಿತ ವ್ಯಕ್ತಿ ಹಣ ಬಿಡಿಸಲು ಸಹಾಯ ಮಾಡಿ, ಎಟಿಎಂ ಕಾರ್ಡ್ ಬದಲಿಸಿ ಬೇರೆ ಕಾರ್ಡ್ ನೀಡಿದ್ದಾನೆ. ಇದಲ್ಲದೆ ಎಟಿಎಂ ಕಾರ್ಡ್ ಮತ್ತು ಪಿನ್ ನಂಬರ್ ಬಳಸಿಕೊಂಡು ಬೇರೆ ಬೇರೆ ಊರುಗಳಲ್ಲಿ ಒಟ್ಟು 69,200 ರೂಪಾಯಿ ಬಿಡಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ತೆ ಕಾರ್ಯಕ್ಕೆ ಇಳಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಒಬ್ಬ ಆರೋಪಿನ್ನು ಪತ್ತೆ ಮಾಡಿದ್ದಾರೆ. ಆರೋಪಿಯು ದಾವಣಗೆರೆ, ಹಗರಿಬೊಮ್ಮನಹಳ್ಳಿ, ಶಿವಮೊಗ್ಗ, ಹಿರಿಯೂರು, ಹರಪನಹಳ್ಳಿ, ಚನ್ನಗಿರಿ, ತರಿಕೇರೆ, ತುಮಕೂರು, ಶಿಗ್ಗಾವಿ, ಹಿರೇಕೇರೂರು ಸೇರಿ 18 ಪ್ರಕಣರಣದಲ್ಲಿ ಭಾಗಿಯಾಗಿದ್ದಾನೆ. ಈ ಪ್ರಕಣದಲ್ಲಿ ಆರೋಪಿಯಿಂದ 8,58,800 ರೂಪಾಯಿ ನಗದು ಹಾಗೂ 78 ಎಟಿಎಂ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕಣದಲ್ಲಿ ಆರೋಪಿ ಪತ್ತೆಯಲ್ಲಿ ಡಿವೈಎಸ್ ಪಿ ನರಸಿಂಹ ವಿ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ನಾಗಪ್ಪ ಬಂಕಾಳಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿಎಸ್ ಐ ಲಲಿತಮ್ಮ, ಫಕೃದ್ಧೀನ್ ಆಲಿ, ಮಹ್ಮದ್ ರಫಿ, ಕೆ. ಗಣೇಶ್ ಮಹ್ಮದ್ ಯೂಸೂಫ್ ಮತ್ತು ಮಾಲತೇಶ ಕೆಳಮನಿ ಅವರನ್ನು ಒಳಗೊಂಡ ತಂಡ ಯಶಸ್ವಿಯಾಗಿದೆ. ಈ ತಂಡಕ್ಕೆ ಎಸ್ ಪಿ ರಿಷ್ಯಂತ್, ಹೆಚ್ಚುವರಿ ಎಸ್ ಪಿ ಆರ್. ಬಿ ಬಸರಗಿ ಶ್ಲಾಘಿಸಿದ್ಧಾರೆ.