ದಾವಣಗೆರೆ: ಚಿನ್ನಾಭರಣ ಅಂಗಡಿ ಮಾಲೀಕರಿಗೆ ಆಭರಣ ತಯಾರು ಮಾಡಿಕೊಡುವುದಾಗಿ ನಂಬಿಸಿ 12,07500 ರಾಪಾಯಿ ಮೌಲ್ಯದ ಬಂಗಾರ ತಗೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಸವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ನಗರದ ಬಾರ್ ಲೈನ್ ನಲ್ಲಿ ವಾಸವಿದ್ದ ಗೌರ್ ಅದಕ್ (37) ಎಂಬ ಬಂಗಾರ ಕೆಲಸಗಾರ, ಭರತ್ ಜ್ಯೂಯಲರಿ ಮಾಲೀಕರಾದ ವಿಜಯಕುಮಾರ್ ಅವರಿಗೆ ಸೇರಿದ 450 ಗ್ರಾಂ ಚಿನ್ನವನ್ನು ಅಭರಣ ಮಾಡಿಕೊಡುವುದಾಗಿ ನಂಬಿಸಿ ಪಡೆದು ಎಸ್ಕೇಪ್ ಆಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 406 ಹಾಗೂ 420 ಅಡಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು.
ಬಸವನಗರ ಪೊಲೀಸರ್ ಆರೋಪಿ ಗೌರ್ ಅದಕ್ ನನ್ನು ಬಂಧಿಸಿದ್ದು, ಆರೋಪಿಯಿಂದ 12.07 ಲಕ್ಷ ಮೌಲ್ಯದ 450 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.