ದಾವಣಗೆರೆ: ಆಸ್ತಿಯ ವಿಚಾರಕ್ಕೆ ವೃದ್ದೆಯನ್ನು ಹತ್ಯೆಗೈದು, ಮೃತದೇಹವನ್ನು ಸುಟ್ಟುಹಾಕಿ ಸಾಕ್ಷ್ಯನಾಶ ಮಾಡಿದ ಏಳು ಜನ ಆರೋಪಿತರನ್ನು ಕೆಟಿಜೆ ನಗರ ಪೊಲೀಸರರು ಬಂಧಿಸಿದ್ದಾರೆ. ಇದೇ ವೇಳೆ ವೃದ್ಧೆಗೆ ಸೇರಿದ 13 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ಉಮಾದೇವಿ ಹತ್ಯೆಯಾದ ವೃದ್ಧೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ದೆಯನ್ನು ಏ.30ರಂದು ಆರೋಪಿಗಳಾದ ಕಾರ್ತಿಕ, ಸಂದೀಪ, ತೇಜಸ್ವಿನಿ, ಮಹೇಶಪ್ಪ, ನಾಗರಾಜ, ಶಿವು, ವಿವೇಕ ಹತ್ಯೆ ಮಾಢಿದ್ದತು. ವೃದ್ಧೆಗೆ ಸೇರಿದ 13,02,000 ರೂ. ಮೌಲ್ಯದ 217 ಗ್ರಾಂ ಬಂಗಾರವನ್ನು ದೋಚಿ, ಶವವನ್ನು ಸುಟ್ಟು ಹಾಕಿದ್ದರು.
ಈ ಬಗ್ಗೆ ವೃದ್ಧೆಯ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ ಮತ್ತು ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಕೆಟಿಜೆ ನಗರ ಠಾಣೆಯ ಪಿಐ ಎಚ್.ಎಸ್. ಸುನೀಲ್‌ಕುಮಾರ್ ನೇತೃತ್ವದಲ್ಲಿ ಪಿಎಸ್ ಐ ಸಾಗರ್ ಅತ್ತರ್‌ವಾಲ ಪಿ.ಎಸ್.ಐ , ಎ.ಎಸ್.ಐ. ಈರಣ್ಣ ಹಾಗೂ ಸಿಬ್ಬಂದಿ ಶ್ರೀನಿವಾಸ್, ರವಿ, ಗೌತಮ್, ಷಣ್ಮುಖ, ಶಿವರಾಜ, ಮಂಜಪ್ಪ, ಗಿರೀಶ್ ಗೌಡ, ಹರೀಶ ನಾಯ್ಕ, ವತ್ಸಲ, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ ಮತ್ತು ಶಾಂತರಾಜ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡವು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಪ್ರಕರಣ ಭೇದಿಸಿ, ಆರೋಪಿತರಿಂದ 217 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.



