ದಾವಣಗೆರೆ: ನಗರದ ಎಕ್ಸಿಬಿಷನ್ ಸ್ಟಾಲ್ ವೊಂದರಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕನನೊಬ್ಬ ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಫೋಷಕರು ಸ್ಟಾಲ್ ಮೇಲೆ ದಾಳಿ ನಡೆಸಿದ್ದಾರೆ.
ದಾವಣಗೆರೆ ನಗರದಲ್ಲಿ ಮನರಂಜನೆಗಾಗಿ ಖಾಸಗಿ ಕಂಪನಿಯೊಂದು ಎಕ್ಸಿಬಿಷನ್ ಹಾಕಿದೆ. ಇಲ್ಲಿ 80 ರೂ.ಗೆ 5 ಸ್ಮೋಕ್ ಬಿಸ್ಕೆಟ್ ಗಳನ್ನು ತಿಂದ ಬಾಲಕ ಅಸ್ವಸ್ಥನಾಗಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೋಷಕರು ಎಕ್ಸಿಬಿಷನ್ ನಲ್ಲಿ ಸ್ಟಾಲ್ ಕಿತ್ತು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸಿಬಿಷನ್ ನಲ್ಲಿ ನೈಟ್ರೋಜಿನ್ ಗ್ಯಾಸ್ ನೊಂದಿಗೆ ಸ್ಮೋಕ್ ಬಿಸ್ಕೆಟ್ ಸ್ಟಾಲ್ ಅನ್ನು ಹಾಕಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ತಿನ್ನಲು ಕೊಡುತ್ತಿತ್ತು. ಇದರಿಂದ ತೊಂದರೆಯಾಗಿದ್ದರಿಂದ ಆಹಾರ ನಿರೀಕ್ಷಕ ಅಧಿಕಾರಿಗಳಿಗೆ ಸ್ಥಳೀಯರು ಕರೆ ಮಾಢಿದ್ದರು. ಸ್ಥಳಕ್ಕೆ ಆಗಮಿಸಿದ ಆಹಾರ ಜಿಲ್ಲಾ ನಿರೀಕ್ಷಧಿಕಾರಿ ಡಾಕ್ಟರ್ ನಾಗರಾಜ್, ನಗರ ಆಹಾರ ನಿರೀಕ್ಷಕ ಅಧಿಕಾರಿ ಕೊಟ್ರೇಶ್ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸ್ಥಳದಲ್ಲಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಎಸ್. ದೇವರಮನೆ ಸೇರಿದಂತೆ ಮತ್ತಿತರರು ಇದ್ದರು.