ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ಹಣವನ್ನು ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ಕ್ರಾಸ್ ಚೆಕ್ ಪೋಸ್ಟ್ ಬಳಿ ಪೊಲೀಸ್ ಮತ್ತು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮಲೇಬೆನ್ನೂರು ಪಟ್ಟಣದ ನಿವಾಸಿ ನಾಗಪ್ಪ ಎನ್ನುವವರು ಮಹೇಂದ್ರ ಬುಲೆರೋ ವಾಹನದಲ್ಲಿ ದಾಖಲೆ ಇಲ್ಲದೆ 1ಲಕ್ಷದ 50 ಹಣವನ್ನು ಸಾಗಿಸುತ್ತಿದ್ದರು. ಮಲೇಬೆನ್ನೂರಿನಿಂದ ಹೊನ್ನಾಳಿ ಕಡೆ ವಾಹನ ಹೋಗುತ್ತಿದ್ದಾಗ ವಾಹನವನ್ನು ಗೊಲ್ಲರಹಳ್ಳಿ ಕ್ರಾಸ್ ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಸಿದಾಗ ಹಣ ಪತ್ತೆಯಾಗಿದೆ.
ವಶಪಡಿಸಿಕೊಂಡ ಹಣವನ್ನು ಹೊನ್ನಾಳಿ ಉಪ ಖಜಾನೆ ಅಧಿಕಾರಿಗೆ ಸುಪರ್ದಿಗೆ ಒಪ್ಪಿಸಲಾಗಿದೆ. ಈ ಹಣ ಭತ್ತ, ಮೆಕ್ಕೆಜೋಳ ಮಾರಾಟದಿಂದ ಬಂದಿದ್ದು ಎಂದು ಹಣದ ಮಾಲೀಕ ನಾಗಪ್ಪ ತಿಳಿದ್ದಾರೆ. ಆದರೆ, ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲದ ಕಾರಣ ಹಣ ವಶಕ್ಕೆ ಪಡೆಯಲಾಗಿದೆ.



