ದಾವಣಗೆರೆ: ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಿಯಮ ಉಲ್ಲಂಘಿಸಿ ಪಟ್ಟಣದ ವಿವಿಧ ಬ್ಯಾಂಕ್‌ಗಳ ಎಟಿಎಂಗೆ ಹಣ ತುಂಬಲು ಬಂದಿದ್ದ ವಾಹನ ಮತ್ತುಅದರಲ್ಲಿದ್ದ 73.98 ಲಕ್ಷವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಎಂಎಸ್ ಕಂಪನಿಯ ವಾಹನ, ಹಣ ತುಂಬುವ ಅವಧಿ ನಿಯಮ ಉಲ್ಲಂಘನೆ ಮಾಡಿತ್ತು. ಸಂಜೆ 5.30ರೊಒಳಗೆ ಎಟಿಎಂಗೆ ಹಣ ತುಂಬವ ನಿಯಮ ಇದೆ. ಆದರೆ ಸಿಎಂಎಸ್ ಕಂಪನಿಯ ವಾಹನ 6.30ರವರೆಗೂ ಪಟ್ಟಣದಲ್ಲಿ ಸಂಚರಿಸುತ್ತಿತ್ತು. ಈ ಕಾರಣ ವಾಹನ ಜಪ್ತಿ ಮಾಡಲಾಗಿದೆ.



