ದಾವಣಗೆರೆ: ಯುವತಿಗೆ ಫೇಸ್ ಬುಕ್, ವಾಟ್ಸಾಪ್ ನಲ್ಲಿ ಅಶ್ಲೀಲ ಮೆಸೇಜ್, ಫೋಟೋ ಹಾಕಿದ ಯುವಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ಅತ್ತಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅತ್ತಿಗೆರೆ ಗ್ರಾಮದ ಗಣೇಶ್ ಎಂಬ ಯುವಕ ಅದೇ ಗ್ರಾಮದ ಯುವತಿಗೆ ಕಾಟ ನೀಡುತ್ತಿದ್ದನು. ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುವುದು, ಫೇಸ್ ಬುಕ್‌ನಲ್ಲಿ ಯುವತಿಯ ಪೋಟೋ ಹಾಕಿ ಕವನ ಬರೆಯುತ್ತಿದ್ದ, ಇದು ಯುವತಿಯ ಕುಟುಂಬಸ್ಥರಿಗೆ ಗೊತ್ತಾಗಿ ಯುವಕನಿಗೆ ಧರ್ಮದೇಟು ನೀಡಿ ಅರೆಬೆತ್ತಲೆಯಾಗಿ ದೇವಸ್ಥಾನದ ಬಳಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



