ದಾವಣಗೆರೆ: ಕುಂದುವಾಡ ಕೆರೆ ಸಮೀಪ ಯುವಕನ ಕತ್ತಿಗೆ ಸಿಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೆಲೆಯಾದ ಯುವಕ ಮಹಮದ್ ಅಲ್ತಾಫ್ ಎಂದು ಗುರುತಿಸಲಾಗಿದ್ದು , ಈತ ಹರಹರ ನಿವಾಸಿಯಾಗಿದ್ದಾನೆ. ಹರಿಹರದಿಂದ ಮದುವೆಗೆ ಬಟ್ಟೆ ತರಲು ಅಕ್ಕನ ಮಗನ ಜೊತೆ ಬೈಕ್ ನಲ್ಲಿ ದಾವಣಗೆರೆಗೆ ಬಂದಿದ್ದಾನೆ. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಎಲ್ಲ ಕಡೆ ಹುಡುಕಿದ್ದಾರೆ. ಒಂದು ದಿನ ಕಳೆದರೂ ಸುಳಿವು ಸಿಗದಿದ್ದಾಗ ಹರಿಹರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಯುವಕನ ಫೋಷಕರು ದೂರು ದಾಖಲಿಸಿದ್ದಾರೆ.
ಈ ವೇಳೆ ಸಂಜೆ ಹೊತ್ತಿಗೆ ಕಂದುವಾಡ ಕೆರೆಯಲ್ಲೊಂದು ಯುವಕನ ದೇಹವಿದ್ದು, ಬಂದು ನೋಡುವಂತೆ ಯುವಕನ ಪೋಷಕರಿಗೆ ಪೊಲೀಸರು ತಿಳಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ನೋಡಿದಾಗ ಅದು ತಮ್ಮ ಮಗನ ದೇಹವೆಂದು ಗುರುತಿಸಿದ್ದು, ನಮ್ಮ ಮಗನನ್ನು ಯಾರೋ ಕತ್ತು ಸಿಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತದೆ ಎಂದು ದೂರು ದಾಖಲಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಭೇಟಿ ನೀಡಿ ಪರಿಶೀಲನೆ ನಡೆದಿಸಿದ್ದಾರೆ. ಆರೋಪಿಗಳ ಪತ್ತೆಗೆ ತನಿಖಾಧಿಕಾರಿ ಎಚ್. ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ ಐ ಪ್ರಸಾದ್, ಪಿ. ರೇಣುಕಾ ಅವನ್ನು ನೇಮಿಸಲಾಗಿದೆ.



