ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಳಿಚೋಡು ಪೊಲೀಸ್ ಠಾಣಾ ವ್ಯಾಪ್ತಿಯ ಹಳವದಂಡೆ-ಗುತ್ತಿದುರ್ಗ ರಸ್ತೆಯ ಹಳವದಂಡೆ ಗ್ರಾಮದ ಸ್ವಾಮಿ ಎನ್ನುವವರ ತೋಟದ ಮಿಷನ್ ರೂಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಂಧದ ಮರದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೆ. 14ರಂದು ಬೆಳಗ್ಗೆ ಹಳವದಂಡೆ ಗ್ರಾಮದ ಸ್ವಾಮಿ ಎನ್ನುವವರ ತೋಟದ ಮಿಷನ್ ರೂಮಿನಲ್ಲಿ ಅಕ್ರಮವಾಗಿ ಗಂಧದ ಮರದ ತುಂಡುಗಳನ್ನು ಶೇಖರಣೆ ಮಾಡಿದ ಮಾಹಿತಿ ಬಂದಿದ್ದು, ಡಿಸಿಐಬಿ ತಂಡ ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳ ತಂಡ ಸದರಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ.
ಸಂಗ್ರಹಿಸಿಟ್ಟಿದ್ದ ಅಂದಾಜು 92 ಕೆಜಿ ತೂಕದ ಗಂಧದ ಮರದ ತಂಡುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ಸ್ವಾಮಿ ತಲೆಮರೆಸಿಕೊಂಡಿರುತ್ತಾನೆ. ಪತ್ತೆ ಕಾರ್ಯ ಮುಂದುವರೆದಿರುತ್ತದೆ. ಮೇಲ್ಕಂಡ ಕಾರ್ಯಚಾರಣೆಯಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ. ಸಂತೋಷ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಬಿಳಿಚೋಡು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸೋಮಶೇಖರ ಕೆಂಚರೆಡ್ಡಿ ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಸಿಬ್ಬಂದಿ ತಿಪ್ಪೇಸ್ವಾಮಿ, ರಾಜುಕೊಡದರ, ಹೆಚ್ ಎಸ್ ಸ್ವಾಮಿ ಹಾಗೂ ಮಜೀದ್, ರಾಘವೇಂದ್ರ, ಆಂಜನೇಯ, ಬಾಲಾಜಿ, ರಮೇಶ್ ನಾಯ್ಕ ತಂಡ ಕಾರ್ಯಚರಣೆ ನಡೆಸಿದೆ. ಈ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.