ದಾವಣಗೆರೆ: ದಾವಣಗೆರೆ, ಹರಿಹರ, ಹಾವೇರಿ, ಚಿತ್ರದುರ್ಗ ಸೇರಿ ವಿವಿಧ ಕಡೆ ಬೈಕ್ ಕಳ್ಳತನ ಮಾಡುತ್ತಿದ್ದ, ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಹರಿಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 4 ಲಕ್ಷ ಮೌಲ್ಯದ 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಹರಿಹರ, ಸವಣೂರು, ಕುಂದಗೋಳ, ಅಜ್ಜಂಪುರ, ಬಂಕಾಪುರ, ರಟ್ಟಿಹಳ್ಳಿ, ದಾವಣಗೆರೆ, ಶಿರಾ, ರಾಣೆಬೆನ್ನೂರು, ಹಿರಿಯೂರು, ಹರಪನಹಳ್ಳಿ, ಹೊಸದುರ್ಗದಲ್ಲಿ ಬೈಕ್ ಕಳ್ಳತನ ಮಾಡಿದ್ದಾನೆ ಎಂದು ಹೆಚ್ಚುವರಿ ಎಸ್‌ಪಿ ವಿಜಯಕುಮಾರ್ ಸಂತೋಷ್ ಅವರು ತಿಳಿಸಿದ್ದಾರೆ.
ಗ್ರಾಮಾಂತರ ಡಿವೈಎಸ್‌ಪಿ ಬಸವರಾಜ ಬಿ.ಎಸ್., ಪಿಐ ಎಸ್.ದೇವಾನಂದ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಚಿದಾನಂದಪ್ಪ ಎಸ್.ಬಿ., ಶ್ರೀಪತಿ ಗಿನ್ನಿ, ಸಿಬ್ಬಂದಿಯಾದ ನಾಗರಾಜ ಸುಣಗಾರ, ಹನುಮಂತ ಗೋಪನಾಳ, ಸಿದ್ದೇಶ್ ಎಚ್., ರವಿ ಆರ್., ಹೇಮಾನಾಯ್ಕ ಬಿ.ಎಸ್., ರುದ್ರಸ್ವಾಮಿ ಕೆ.ಸಿ., ಸತೀಶ್ ಟಿ.ವಿ., ಮಂಜುನಾಥ ಐ.ಎಚ್., ಸಿದ್ಧರಾಜು ಎಸ್.ಬಿ., ತಿಪ್ಪೇಸ್ವಾಮಿ ಕೆ.ಎಲ್., ಚಾಲಕ ಮಂಜುನಾಥ್, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.