ದಾವಣಗೆರೆ: ಧರ್ಮಸ್ಥಳ ಹೋಗಿ ಬರುವಷ್ಟರಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಎಪಿಎಂಸಿ ಕ್ವಾಟ್ರಸ್ ನ ಮನೆಯೊಂದರಲ್ಲಿ ನಡೆದಿದೆ. ಮನೆಯಲ್ಲಿ 4.07 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ನಗರದ ಪಿ.ಬಿ.ರಸ್ತೆಯ ಎಪಿಎಂಸಿ ಕ್ವಾಟ್ರಸ್ ನಲ್ಲಿ ಎಪಿಎಂಸಿ ಅಧೀಕ್ಷಕರ ಮನೆಯ ಬೀಗ ಮುರಿದು 4.07 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ. ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆಯ ನಿವಾಸಿಯಾದ ಬಸವರಾಜ, ಪತ್ನಿ ಎಪಿಎಂಸಿ ಅಧೀಕ್ಷಕಿ ತಿಪ್ಪಮ್ಮ ಜಿ.ಕೆ. ಅವರ ಮನೆಯಲ್ಲಿ ಕಳ್ಳತನ ನಡೆದಿದೆ.ಈ ದಂಪತಿ ಜ.12ರಂದು ಮನೆಗೆ ಬೀಗ ಹಾಕಿ ಧರ್ಮಸ್ಥಳಕ್ಕೆ ಹೋಗಿದ್ದರು. ಧರ್ಮಸ್ಥಳದಿಂದ ಬಂದು ನೋಡಿದ್ದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಮನೆಗೆ ಬೀರುವಿನಲ್ಲಿ ಇಟ್ಟಿದ್ದ ಲಕ್ಷ್ಮಿ ಡಾಲರ್ ತಾಳಿ, ಬಂಗಾರದ ಓಲೆ. ಜುಮುಕಿ, ಚೈನು, ಉಂಗುರ, ಬೆಳ್ಳಿಯ ಗಣಪತಿ, ತಟ್ಟೆ, ಕುಂಕುಮದ ಬಟ್ಟಲು ಸೇರಿ ಇತರೆ ವಸ್ತುಗಳು ಕಳ್ಳತನವಾಗಿವೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



