ದಾವಣಗೆರೆ: ಅಡಿಕೆ ದುಡ್ಡು ಕಳ್ಳತನ ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ತೇಜೋವಧೆ ಪ್ರಯತ್ನ ನಡೆಯುತ್ತಿದೆ. ನಾನು ಯಾವುದೇ ಹವಾಲಾ ಹಣ ವರ್ಗಾವಣೆ ಮಾಡಿಲ್ಲ. ಯಾವುದೇ ಆಧಾರವಿಲ್ಲದೇ ಆರೋಪ ಮಾಡಿದರೆ ಸುಮ್ಮನಿರಲ್ಲ ಎಂದು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಕಿಡಿಕಾರಿದರು.
ಜಿಎಂಐಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ವಿಷಯಕ್ಕೆ ಜ. 16ರಂದು ಆವಣಗೆರೆಯಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುವುದಾಗಿ ಮಾಹಿತಿ ಇದೆ. ಪ್ರತಿಭಟನೆ ವೇಳೆ ನಿಂದನೆ ನಡೆಸಿದರೆ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
2024ರ ಜನವರಿ 7ರಂದು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಭೀಮನಸಮುದ್ರದ ಉಮೇಶ್ ಹಾಗೂ ಮಲ್ಲಿಕಾರ್ಜುನ್ ಎಂಬುವವರು ದೂರು ಕೊಟ್ಟಿದ್ದರು. ಆರೋಪಿ ಸ್ವಾಮಿ ಹಾಗೂ ಅನುಪಮಾ ಎಂಬಾಕೆಯಿಂದ 93 ಲಕ್ಷ ರೂ. ನಗದು, ಬಂಗಾರ, ಮೊಬೈಲ್ ಸೇರಿದಂತೆ ಸುಮಾರು 97 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.



