ದಾವಣಗೆರೆ: ಅಡಿಕೆ ತೋಟದಲ್ಲಿ ಕೊಯ್ಲು ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೆಂಗಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಡಿಕೆ ತೋಟದಲ್ಲಿ ಸುಮಾರು 60 ಅಡಿ ಉದ್ದದ ಅಲ್ಯೂಮಿನಿಯಂ ರಾಡ್‌ಗೆ ಕುಡುಗೋಲು ಕಟ್ಟಿಕೊಂಡು ಎಲ್.ಆರ್.ಭಾನು (29) ಎಂಬಾತ ಅಡಕೆ ಕೊಯ್ಲು ಮಾಡುತ್ತಿದ್ದನು. ಆದರೆ, ಯುವಕ ಕುಡುಗೋಲಿಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ತೋಟದ ಬದುವಿನಲ್ಲಿದ್ದ 11 ಕೆವಿ ಲೈನ್ ಗೆ ಕುಡುಗೋಲು ತಗುಲಿದ್ದು, ಕೂಡಲೇ ವಿದ್ಯುತ್ ಶಾಕ್ ನಿಂದ ಯುವಕ ಮೃತಪಟ್ಟಿದ್ದಾನೆ. ಈ ಬಗ್ಗೆ ಬೆಸ್ಕಾಂ ಎಇಇ ಅವರು ಘಟನೆಯ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಕೊಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



