ಶಿವಮೊಗ್ಗ: ಅಳಿವಿನಂಚಿನಲ್ಲಿರುವ ಗುಲಾಬಿ ಉಂಗುರದ ಗಿಳಿಯನ್ನು ಬಳಸಿ, ಗಿಳಿಶಾಸ್ತ್ರ ಹೇಳುತ್ತಿದ್ದ ದಾವಣಗೆರೆ ಮೂಲದ ಇಬ್ಬರನ್ನು ಸಾಗರ ಅರಣ್ಯ ಸಂಚಾರಿ ದಳದಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ನಗರದ ಮಂಜುನಾಥ್ (36)ಹಾಗೂ ಯಲ್ಲಪ್ಪ (40) ವಶಕ್ಕೆ ಪಡೆಯಲಾಗಿರುವ ಆರೋಪಿಗಳು. ರಿಪ್ಪನ್‌ಪೇಟೆಯ ಕೆರೆಹಳ್ಳಿ ಕ್ರಾಸ್ ಬಳಿಯಲ್ಲಿ ಇಬ್ಬರು ಗುಲಾಬಿ ಉಂಗುರದ ಗಿಳಿಯನ್ನು ಬಳಸಿ ಜ್ಯೋತಿಷ್ಯ ಹೇಳುತ್ತಿದ್ದರು. ಸಬ್‌ಇನ್‌ಸ್ಪೆಕ್ಟರ್ ವಿನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ, ಗಿಳಿ ಹಾಗೂ ಇಬ್ಬರ ವಶಕ್ಕೆ ಪಡೆಯಲಾಗಿದೆ.



