ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋದ 206 ಮೊಬೈಲ್ ಗಳನ್ನು CEIR PORTAL ಸಹಾಯದಿಂದ ಪತ್ತೆ ಮಾಡಿದ್ದು, ವಾರಸುದಾರರಿಗೆ ಹಿಂತಿರುಗಿಸಲಾಯಿತು. ಈ ಮೊಬೈಲ್ ಗಳ ಮೌಲ್ಯ ಅಂದಾಜು ಮೊತ್ತ 25,00,000/-ರೂಗಳಾಗಿದೆ.
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎಸ್ಪಿ
ಉಮಾ ಪ್ರಶಾಂತ್‌ಅಧ್ಯಕ್ಷತೆಯಲ್ಲಿ CEIR ಪೋರ್ಟಲ್ ಮೂಲಕ ಪತ್ತೆಯಾದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್‌ಗಳನ್ನು CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ ಮೊಬೈಲ್‌ಗಳ ಪೈಕಿ 206 ಮೊಬೈಲ್‌ಗಳನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಿದ್ದು, ಎಸ್ಪಿ ಅವರು ಮೊಬೈಲ್ ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿದರು. ಪತ್ತೆಯಾದ ಮೊಬೈಲ್‌ಗಳ
ಅಂದಾಜು ಮೊತ್ತ 25,00,000/-ರೂಗಳು ಆಗಿರುತ್ತದೆ.
2023 ರ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾದ | ಕಳೆದು ಹೋದ ಮೊಬೈಲ್ ಫೋನ್‌ಗಳನ್ನು
CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI
ನಂಬರ್ ಮೂಲಕ ಒಟ್ಟು 3880 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದ್ದು, ಅದರಲ್ಲಿ 880 ಮೊಬೈಲ್‌ಗಳನ್ನು
ಮೊಬೈಲ್ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಕಳುವಾದ | ಕಳೆದು ಹೋದ ಮೊಬೈಲ್ ಫೋನ್‌ಗಳನ್ನು ವಾರಸುದಾರರು KSP ಮೊಬೈಲ್ App ಮೂಲಕ e-lost ನಲ್ಲಿ ದೂರು ದಾಖಲಿಸಿ, ದೂರಿನ ಸ್ವೀಕೃತಿ ಪ್ರತಿಯನ್ನು ಡೌನ್‌ಲೋಡ್ BoBoots, Boso ‘CEIR’ web portal (https://www.ceir.gov.in) ese KSP
ಮೊಬೈಲ್ App ಮೂಲಕ ಡೌನ್‌ಲೋಡ್ ಮಾಡಿಕೊಂಡ ದೂರಿನ ಸ್ವೀಕೃತಿ ಪ್ರತಿ ಹಾಗೂ ಆಧಾರ್ / ಇತರೆ ಗುರುತಿನ ಚೀಟಿಯನ್ನು ಅಪ್‌ಲೋಡ್ ಮಾಡಿ ಮೊಬೈಲ್ ಬ್ಲಾಕ್ ಮಾಡುವ ವಿಧಾನವನ್ನು ತಿಳಿಸಲಾಗಿರುತ್ತದೆ.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಎಸಗಪಿ ಮಂಜುನಾಥ ಜಿ, ಸಿಇಎನ್ ಪೊಲೀಸ್ ನಿರೀಕ್ಷಕ ಪಿ ಪ್ರಸಾದ್ ರವರು, ಪೊಲೀಸ್ ಸಿಬ್ಬಂದಿಗಳು ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು. ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾದಲ್ಲಿ ಸುಲಿಗೆಯಾಗಿದ್ದಲ್ಲಿ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ #CEIR ವೆಬ್ ಪೋರ್ಟಲ್ ಗೆ ಭೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆಯಲು ಈ ಮೂಲಕ
ತಿಳಿಸಲಾಗಿದೆ.



