ದಾವಣಗೆರೆ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 15 ಸಾವಿರ ಮೌಲ್ಯದ 543 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಸಂತೇಬೆನ್ನೂರು ಗ್ರಾಮದ ಪುಷ್ಕರಣಿ ಮುಂಭಾಗದ ಸಂತೆಬೆನ್ನೂರು- ಚನ್ನಗಿರಿ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುತ್ತಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಎ-01 ಸೈಯದ್ ಖಾದೀರ್ (20), ಗಾರೆ ಕೆಲಸ,ವಾಸ: ನಲ್ಲೂರು ಗ್ರಾಮ, ಚನ್ನಗಿರಿ ತಾಲೂಕು, ಸಂತೇಬೆನ್ನೂರು ಗ್ರಾಮದ ಎ-02 ಇಸ್ಮಾಯಿಲ್ ಜಭಿ (19) ಗಾರೆ ಕೆಲಸ ಹಾಗೂ ಎ-03 ಎಂ ಫಜಲ್, (20) ಬಂಧನ ಮಾಡಲಾಗಿದೆ. ಆರೋಪಿತರಿಂದ 15.000/- ರೂ ಬೆಲೆ ಬಾಳುವ 543 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಚನ್ನಗಿರಿ ಟೌನ್ ವಾಸಿಯಾದ ದಾದು, ವಿನಿ @ ವಿನಯ್ ಎಂಬುವರಿಂದ ಗಾಂಜಾವನ್ನು ಖರೀದಸು ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.
ಪ್ರಕರಣದ ತನಿಖೆ ಮುಂದುವರೆದಿರುತ್ತದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಚನ್ನಗಿರಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು,
ಸಂತೇಬೆನ್ನೂರು ಪೊಲೀಸ್ ಠಾಣೆಯ ಪಿ ಎಸ್ ಐ ರೂಪತೆಂಬದ್ ಹಾಗೂ ಸಿಬ್ಬಂದಿಗಳಾದ ಶಿವನಾಗಪ್ಪ ಎಸ್. ಎಎಸ್‌ಐ, ವೈಬಿ ರವಿ, ಗಿರೀಶ, ಧರ್ಮಪ್ಪ, ಕೊಟ್ರೇಶ, ಪ್ರಹ್ಲಾದ ಎಸ್., ಸೋಮಶೇಖರ ತಂಡದಲ್ಲಿದ್ದರು. ಈ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ ಹಾಗೂ ಹೆಚ್ಚುವರಿ ಪೊಲೀಸ್ ವರಿಷಾಧಿಕಾರಿ ವಿಜಯ ಎಂ ಸಂತೋಷ್, ಮತ್ತು ಮಂಜುನಾಥ ಜಿ ಪಶಂಸೆ ವ್ಯಕ್ತಪಡಿಸಿದ್ದಾರೆ.