ದಾವಣಗೆರೆ: ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯ ಬಾಡ ಕ್ರಾಸ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 18,000 ರೂ. ಬೆಲೆ ಬಾಳುವ ಮೊಬೈಲ್, ಫೋನ್ ಫೇಯಿಂದ ಪಡೆದ 36,100 ರೂ ಹಣ ಮತ್ತು ಆಕ್ಟಿವಾ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಡಿ.15ರಂದು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ರಾಮಚಂದ್ರ ರೆಡ್ಡಿ ಎಂಬ ವ್ಯಕ್ತಿ ತನ್ನ ಬೈಕನ್ನು ನಿಲ್ಲಿಸಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದತರು. ಏಕಾಏಕಿ ಬಂದ ಮೂರು ಜನ ದುಷ್ಕರ್ಮಿಗಳು, ರಾಮಚಂದ್ರ ರೆಡ್ಡಿ ತಳಿಸಿ, ಹೆದರಿಸಿ ಅವನ ಮೊಬೈಲ್ ಮತ್ತು 300/-ರೂ ದುಡ್ಡು ಕಿತ್ತುಕೊಂಡು ಅಫೋನ್ ಪೇ ಪಾಸ್‌ವರ್ಡ್‌ನ್ನು ಪಡೆದುಕೊಂಡು ಪರಾರಿಯಾಗಿ, ಫೋನ್‌ಪೇಯಿಂದ ವಿವಿಧ ಅಂಗಡಿಗಳಿಗೆ
ಬೇಟಿ ನೀಡಿ, ಆಸ್ಪತ್ರೆಗೆ ಅರ್ಜೆಂಟಾಗಿ ಹಣ ಬೇಕಾಗಿದೆ ಫೋನ್‌ಪೇ ಮಾಡುತ್ತೇವೆ ನೀವು ಕ್ಯಾಪ್ ಕೊಡಿ ಎಂದು 42,300/-ರೂಗಳನ್ನು ಪಿತ್ಯಾದಿಯ ಮೊಬೈಲ್‌ನಿಂದ ವರ್ಗಾಯಿಸಿ ನಗದು ಪಡೆದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ರಾಮಚಂದ್ರ ರೆಡ್ಡಿ ದೂರಿನ ಮೇರೆಗೆ ದಾವಣಗೆರೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಪ್ರಕರಣವನ್ನು ಎಸ್ಪಿ ಉಮಾ ಪ್ರಶಾಂತ್ ಮತ್ತು ಹೆಚ್ಚುವರಿ ಎಸ್ಪಿ ವಿಜಯಕುಮಾರ್.ಎಂ ಸಂತೋಷ ಮತ್ತು ಡಿವೈಎಸ್ಪಿ ಮಲ್ಲೇಶ್.ದೊಡ್ಡಮನಿ ಮಾರ್ಗದರ್ಶನದಲ್ಲಿ ಆಜಾದ್ ನಗರ (ಗಾಂಧಿನಗರ) ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಎಸ್. ಬಾಲಚಂದ್ರ ನಾಯಕ್ ಸಿಬ್ಬಂದಿಯವರಾದ ನಿಜಲಿಂಗಪ್ಪ, ದ್ಯಾಮೇಶ್, ರಾಜಪ್ಪ, ಸಿದ್ದೇಶ್, ನಾಗರಾಜಯ್ಯ, ನಾರಾಯಣ, ನಾಗರಾಜ ಪ್ರಕರಣದ ಆರೋಪಿ ಪ್ರವಿಣ್.ವಿ.ಗೌಡ (22) ಮತ್ತು ಮತ್ತೊಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದಯಲಾಗಿದೆ. ಆರೋಪಿಯಿಂದ 18,000/-ರೂ ಬೆಲೆ ಬಾಳುವ ಮೊಬೈಲ್, ನಗದೀಕರಿಸಿಕೊಂಡಿದ್ದ 36,100/-ರೂ ಹಣ ಮತ್ತು ಆಕ್ಟಿವಾ ಬೈಕನ್ನು ವಶಪಡಿಸಿಕೊಂಡು ಆರೋಪಿತ ಪ್ರವೀಣ್.ವಿ.ಗೌಡ ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಇರಿಸಲಾಗಿದೆ. ಇನ್ನೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ಮಂದಿರ ನೀಡಲಾಗಿದೆ.



