ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸಿ.ಇ.ಎನ್ ಅಪರಾಧ ಠಾಣೆ ಪೊಲೀಸರು MDMA ಮಾದಕ ವಸ್ತು ಮತ್ತು ಹುಲಿ ಉಗುರು ಮಾರಾಟಗಾರ ಮೇಲೆ ದಾಳಿ ಮಾಡಿದ್ದು, 49 ಗ್ರಾಂ MDMA ಮಾದಕ ವಸ್ತು ಮತ್ತು 6 ಹುಲಿ ಉಗುರು ಸೇರಿ ಒಟ್ಟು 7.20 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ನಗರದ ಜಿ. ಮಲ್ಲಿಕಾರ್ಜುನಪ್ಪ ಬಡಾವಣೆಯ ಎನ್.ಹೆಚ್.48 ಸರ್ವಿಸ್ ರಸ್ತೆ ಕಡೆಯಿಂದ ಮಯೂರು ಗ್ಲೋಬಲ್ ಶಾಲೆಯ ಕಡೆಗೆ ಹೋಗುವ ರಸ್ತೆಯಲ್ಲಿ ಯಾರೋ ವ್ಯಕ್ತಿಗಳು MDMA ಮಾದಕ ವಸ್ತುವನ್ನು ಇಟ್ಟುಕೊಂಡು ಸೇವನೆ ಮಾಡುತ್ತಿರುತ್ತಾರೆ ಅಂತ ಖಚಿತ ಮಾಹಿತಿ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ದಾಳಿ ಮಾಡಿದ್ದು, 04 ಜನ ಆರೋಪಿತರನ್ನು ಹಿಡಿದು ಅವರುಗಳ ಕಡೆಯಿಂದ MDMA ಮಾದಕ ವಸ್ತುವನ್ನು ಮತ್ತು 1 ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಸಾದ್ ಪಿ ಮತ್ತು ಸಿಬ್ಬಂದಿಯವರಾದ ಪ್ರಕಾಶ್, ನಾಗರಾಜ, ಮುತ್ತುರಾಜ್, ಗೋವಿಂದರಾಜ್, ಮಲ್ಲಿಕಾರ್ಜುನ, ಲಿಂಗರಾಜ್ ಹಾಗೂ ತಾಂತ್ರಿಕ
ಸಿಬ್ಬಂದಿ ರಾಘವೇಂದ್ರ, ಶಾಂತರಾಜ್, ರಾಮಚಂದ್ರ ಜಾಧವ್ ಅವರನ್ನೊಳಗೊಂಡ ತಂಡ MDMA ಮಾದಕ ವಸ್ತುವನ್ನು ಮಾರಾಟ ಮಾಡಿದ ಒಬ್ಬ ಆರೋಪಿತನನ್ನು ಹಿಡಿದು
ಆತನ ಕಡೆಯಿಂದ ಒಂದು ಮೊಬೈಲ್‌ನ್ನು ವಶಪಡಿಸಿಕೊಂಡು, ಆರೋಪಿತನ ಮಾಹಿತಿಯ ಮೇರೆಗೆ ಬೆಂಗಳೂರು ನಗರದ ಬಸವೇಶ್ವರ ಬಡಾವಣೆ 2ನೇ ಹಂತ 4ನೇ ಮೇನ್ 5ನೇಕ್ರಾಸ್ ನಲ್ಲಿರುವ ಮನೆಯ ಮೇಲೆ ಶೋಧನಾ ವಾರೆಂಟ್ ಪಡೆದು ದಾಳಿ ಮಾಡಿ ಮನೆಯಲ್ಲಿದ್ದ ಮೂವರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.
ಮನೆಯಲ್ಲಿದ್ದ MDMA ಮಾದಕ ವಸ್ತುವನ್ನು ಮತ್ತು ಮೇಲ್ನೋಟಕ್ಕೆ ಹುಲಿಯ ಉಗುರಿನಂತೆ ಕಾಣುವ 6 ಹುಲಿ ಉಗುರುಗಳನ್ನು ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಪ್ರಕರಣದಲ್ಲಿ 49 ಗ್ರಾಂ MDMA ಮಾದಕ ವಸ್ತು (ಅಂದಾಜು ಮೌಲ್ಯ 3.20 ಲಕ್ಷ ರೂ), 6 ಹುಲಿ ಉಗುರು, 04 ಮೊಬೈಲ್‌ಗಳು, 1 ಕಾರನ್ನು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಅಂದಾಜು ರೂ. 7,20,000/-ಮೌಲ್ಯದ ವಸ್ತುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಳ್ಳಲಾಗಿದೆ. ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ಮಾಡಿ ಮೇಲ್ಕಂಡ 3 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು , ತನಿಖೆ ಮುಂದುವರೆದಿರುತ್ತದೆ. ಮೇಲ್ಕಂಡ ದಾಳಿಯಲ್ಲಿ ಆರೋಪಿತರ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿ ಸಿಬ್ಬಂದಿಗಳಿಗೆ ಎಸ್ಪಿ ಉಮಾಪ್ರಶಾಂತ್ ಹಾಗೂಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ ಸಂತೋಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- ಆರೋಪಿತರುಗಳ ವಿವರ:
- 1)ಅಶೋಕ್ ಕುಮಾರ್ ಎಸ್, 27 ವರ್ಷ, ಷೇರ್ ಮಾರ್ಕೇಟ್ ಟ್ರೇಡಿಂಗ್ ವಾಸ:- ಬಾಲಾಜಿ ನಗರ,
ದಾವಣಗೆರೆ ಸ್ವಂತ ಊರು ಕೆರೆಯಾಗಲ ಚಿಕ್ಕೇನಹಳ್ಳಿ ಗ್ರಾಮ ಹೊಂದರೆ ತಾಲ್ಲೂಕ್, ತುಮಕೂರು ಜಿಲ್ಲೆ
- 02) ರಮೇಶ್ ಕುಮಾರ್ ಗಾಂಸಿ, 39 ವರ್ಷ, ವಾಸ:- ಅರ್.ಎಂ.ಸಿ ಲಿಂಕ್ ರೋಡ್ ಪಾರ್ಕ ಹಿಂಬಾಗ, ದಾವಣಗೆರೆಸ್ವಂತ ವಿಳಾಸ- ಬಾಲೋತ್ರ ಜಿಲ್ಲೆ, ರಾಜಸ್ಥಾನ ರಾಜ್ಯ
- 03) ಎಂ.ಅರ್. ಲೋಕೇಶ, 40 ವರ್ಷ, ಪುಟ್ಟ ವ್ಯಾಪಾರ ಕೆಲಸ, ವಾಸ:- ಅರ್.ಎಂ.ಸಿ ಲಿಂಕ್ ರೋಡ್ ದಾವಣಗೆರೆ
- 04) ಕಾರ್ತಿಕ್, 32 ವರ್ಷ, ಕಾರು ಚಾಲಕ ವೃತ್ತಿ, ವಾಸ:- ವಿನೋಬ ನಗರ, ದಾವಣಗೆರೆ
- 05) ರಾಮ್ ರತನ್ @ ನೌರತನ್, 34 ವರ್ಷ, ಕಾರ್ಪೆಂಟರ್ ಕೆಲಸ, ವಾಸ:- ನಿಜಲಿಂಗಪ್ಪ ಬಡಾವಣೆ, ದಾವಣಗೆರೆ
- 06) ಸುನೀಲ್ ಕುಮಾರ್, 28 ವರ್ಷ, ಸ್ಟೇಲ್ ರಿಲೀಂಗ್ ಕೆಲಸ, ವಾಸ: ಬಸವೇಶ್ವರ ಬಡಾವಣೆ, ಬೆಂಗಳೂರು, ಸ್ವಂತ ಊರು -ಸ್ಯಾಂಚೋರ್ ತಾಲ್ಲೂಕು & ಜಿಲ್ಲೆ, ರಾಜಸ್ಥಾನ ರಾಜ್ಯ,
- 07) ಅಶೋಕ್ ಕುಮಾರ್, 23 ವರ್ಷ, ಸ್ಟೀಲ್ ಸ್ಮಾಪ್ ವ್ಯಾಪಾರ, ವಾಸ:- ಕೊಡಿಗೆಹಳ್ಳಿ ಬೆಂಗಳೂರು, ಸ್ವಂತ ಊರು -ಸ್ಯಾಂಚೋರ್ ತಾಲ್ಲೂಕು & ಜಿಲ್ಲೆ, ರಾಜಸ್ಥಾನ ರಾಜ್ಯ