ದಾವಣಗೆರೆ: ಕಾನೂನು ಬಾಹಿರವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರು ಆರಾಒಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 26 ತುಂಬಿದ, 12 ಖಾಲಿ ಸಿಲಿಂಡರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ನಗರದ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾ ನಗರ ಕ್ಕೆ ಹೋಗುವ ರಸ್ತೆಯ ಪಕ್ಕದ ಪಾಳು ಬಿದ್ದಿರುವ ಕೆಎಂಸಿ ಕಾಂಪೌಂಡ್ ಒಳಗಿನ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಆರೋಪಿಗಳಾದ 1) ಮಲ್ಲೇಶಪ್ಪ (50) ಆಟೋ ಚಾಲಕರ ವೃತ್ತಿ, ಭಾರತ್ ಕಾಲೊನಿ, ದಾವಣಗೆರೆ, 2) ಸುಹೆಲ್ ರಜಾ (20) HP ಕಂಪನಿಯಲ್ಲಿ ಡ್ರೈವರ್ ಕೆಲಸ, ಭಾಷಾ ನಗರ. ಇವರುಗಳನ್ನು ಬಂಧನ ಮಾಡಲಾಗಿದೆ. ಆರೋಪಿತರುಗಳಿಂದ 1) HP ಹೆಸರಿನ 26 ತುಂಬಿದ ಸಿಲಿಂಡರ್ ಗಳು, 2) 12 HP ಹೆಸರಿನ ಖಾಲಿ ಸಿಲಿಂಡರ್ ಗಳು, 3) 03 ಸಣ್ಣ ಖಾಲಿ ಸಿಲಿಂಡರ್ ಗಳು, 4) ಗ್ಯಾಸ್ ರೀಪಿಲ್ಲಿಂಗ್ ಕಡ್ಡಿ, 5) ಗ್ಯಾಸ್ ರಿಫಿಲ್ಲಿಂಗ್ ಯಂತ್ರ ಸೇರಿದಂತೆ ಇತರೆ ತೂಕದ ಯಂತ್ರಗಳು ಹಾಗೂ ಒಂದು ಗೊಡ್ಸ್ ಆಫೆ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಡಿಸಿ ಆರ್ ಬಿ ಘಟಕದ ಪೊಲೀಸ್ ನಿರೀಕ್ಷಕ ರುದ್ರಪ್ಪ ಎಲ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಘವೇಂದ್ರ, ಮಜೀದ್, ಅಶೋಕ್, ಬಾಲಾಜಿ, ನಟರಾಜ್, ಆಂಜನೇಯ, ಮಾರುತಿ ಒಳಗೊಂಡ ತಂಡ ದಾಳಿ ಮಾಡಿದೆ.ಈ ಸಂಬಂಧ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ ಸಂತೋಷ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



