ದಾವಣಗೆರೆ: ಪ್ರಯಾಣಿಕರನ್ನು ಆಟೋದಲ್ಲಿ ಹತ್ತಿಸಿಕೊಂಡು ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಮಾಶಂಕರ ಎಂಬುವರು ಶಿಬಾರಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಲು ವಿಧ್ಯಾರ್ಥಿಭವನದ ಹತ್ತಿರ 60 ರೂ ಬಾಡಿಗೆ ಮಾತನಾಡಿಕೊಂಡು ಆಟೋವನ್ನು ಹತ್ತಿದ್ದರು. ಆಟೋದಲ್ಲಿ ಮೊದಲೇ ಒಬ್ಬ ವ್ಯಕ್ತಿ ಇದ್ದು ಆಟೋ ಚಾಲಕ ಆ ವ್ಯಕ್ತಿಯನ್ನು ಈರುಳ್ಳಿ ಮಾರ್ಕೆಟ್ ಹತ್ತಿರ ಇಳಿಸಿ ನಂತರ ಶಿಬಾರಕ್ಕೆ ಬಿಡುವುದಾಗಿ ಹೇಳಿ ಈರುಳ್ಳಿ ಮಾರ್ಕೆಟ್ ಹತ್ತಿರ ನಿರ್ಜನ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಅವನ ಮೇಲೆ ಹಲ್ಲೆ ಮಾಡಿ ಒಂದು ಮೊಬೈಲ್ , 2500 ರೂ ನಗದು ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು.
ಈ ಪ್ರಕರಣಗಳ ಆರೋಪಿತರನ್ನು ಮತ್ತು ಮಾಲು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ ಪಿ ನರಸಿಂಹ ವಿ ತಾಮ್ರಧ್ವಜ ಇವರ ಮಾರ್ಗದರ್ಶನಲ್ಲಿ ತನಿಖಾಧಿಕಾರಿಯಾದ ದಾವಣಗೆರೆ ಕೆಟಿಜೆ ನಗರ ವೃತ್ತದ ಸಿಪಿಐ ಹೆಚ್.ಗುರುಬಸವರಾಜ್ ನೇತೃತ್ವದ ತಂಡ ಇಬ್ಬರು ಆರೋಪಿತರುಗಳನ್ನು ದಸ್ತಗಿರಿ ಮಾಡಿದೆ. ಆರೋಪಿತರಿಂದ 1,200 ರೂ ನಗದು ಹಣ, ಸ್ಯಾಮ್ ಸಂಗ್ ಮೊಬೈಲ್, ಕೃತ್ಯಕ್ಕೆ ಉಪಯೋಗಿಸಿದ ಆಟೋ ವಶಪಡಿಸಿಕೊಂಡಿದ್ದಾರೆ. ಆರೋಪಿತರ ಪತ್ತೆಕಾರ್ಯದಲ್ಲಿ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ.ನರಸಿಂಹ ವಿ ತಾಮ್ರಧ್ವಜ, ಕೆ.ಟಿ.ಜೆ ನಗರ ವೃತ್ತದ ಸಿಪಿಐ ಶ್ರೀ ಹೆಚ್.ಗುರುಬಸವರಾಜ, ಕೆಟಿಜೆ ನಗರ ಠಾಣೆಯ ಪಿಎಸ್‌ಐ ಫ್ರಭು ಡಿ ಕೆಳಗಿನಮನೆ, ತಿಪ್ಪೇಸ್ವಾಮಿ, ಮಂಜಪ್ಪ, ಷಣ್ಮುಖ, ಶಂಕರ ಜಾಧವ್, ಪ್ರಕಾಶ, ಗಿರೀಶಗೌಡ, ತಿಮ್ಮಣ್ಣ, ರವಿ ಲಮಾಣಿ, ಸಂತೋಷ ಭಾಗಿಯಾಗಿದ್ದರು.



