ದಾವಣಗೆರೆ: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 1.45 ಲಕ್ಷ ಮೌಲ್ಯದ 4 ಬೈಕ್ ವಶಪಡೆಯಲಾಗಿದೆ.
ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಆರೋಪಿ ಮುಕ್ತಿಯಾರ್ ಖಾನ್(30)ನಗರದ ವಸಂತ ಟಾಕೀಸ್ ಹತ್ತಿರ ಸ್ಪೆಂಡರ್ ಪ್ಲಸ್ ಬೈಕ್ ನಲ್ಲಿ ಬಂದಿದ್ದು, ಅನುಮಾನಸ್ಪದವಾಗಿ ಕಂಡುಬಂದಿದ್ದಾನೆ. ಕೂಡಲೇ ವ್ಯಕ್ತಿಯ ಬಳಿ ಬೈಕ್ ದಾಖಲೆಗಳ ಬಗ್ಗೆ ವಿಚಾರಿಸಿದಾಗ ಬೈಕ್‌ನ ಬಗ್ಗೆ ಸಮಂಜಸ ಉತ್ತರ ಕೊಡದ ಕಾರಣ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದು, ದಾವಣಗೆರೆ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಬೈಕ್ ಗಳನ್ನು ಹಾಗೂ ಗಾಂಧಿನಗರ ಪೊಲೀಸ್ ಠಾಣಾ ಮತ್ತು ಹರಿಹರ ನಗರ ಪೊಲೀಸ್ ಠಾಣೆಯ ತಲಾ ಒಂದು ಒಟ್ಟು 4 ಬೈಕ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದAತೆ ಒಟ್ಟು 1.45 ಲಕ್ಷ ಮೌಲ್ಯದ 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ ಸಂತೋಷ ಶ್ಲಾಘಿಸಿದ್ದಾರೆ.



