ದಾವಣಗೆರೆ: ಎರಡ್ಮೂರು ವರ್ಷದ 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ನಾಗಲಿಂಗಪ್ಪ ಪೂಜಾರ್ ಮತ್ತು ವಸಂತಪ್ಪ ಪೂಜಾರ್ ಎಂಬುವರಿಗೆ ಸೇರಿದ ಮೂರುವರೆ ಎಕರೆಯಲ್ಲಿ ಅಡಿಕೆ ತೋಟ ಈ ಘಟನೆ ಸಂಭವಿಸಿದೆ. ಎರಡ್ಮೂರು ವರ್ಷದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ. ಕಷ್ಟಪಟ್ಟು ಮಕ್ಕಳಂತೆ ಬೆಳೆಸಿದ್ದ ಅಡಿಕೆ ಮರ ನಾಶ ಮಾಡಿದ್ದನ್ನು ಕಂಡ ರೈತ ಗೋಳಾಡಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಕಣ್ಣೀರು ಹಾಕಿದ್ದಾನೆ. ಮಲೇಬೆನ್ನೂರು ಸಬ್ ಇನ್ ಸ್ಪೆಕ್ಟರ್ ಪ್ರಭು ಡಿ. ಕೆಳಗಿನಮನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



