ದಾವಣಗೆರೆ: ಮೊಬೈಲ್ ಕಿತ್ತುಕೊಂಡು ಪರಾರಿ ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಬೈಕ್ , ಮೊಬೈಲ್ ವಶಕ್ಕೆ ಪಡೆಯಲಾಗಿದೆ.ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಹರ ಬೈಪಾಸ್‌ನ ಕೃಷ್ಣಪ್ಪ ಸ್ಮಾರಕದ ಬಳಿ ಘಟನೆ ನಡೆದಿದೆ.ಇಬ್ಬರು ಆರೋಪಿಗಳು ವ್ಯಕ್ತಿಯೊಬ್ಬರ ಮೊಬೈಲ್ ಕಿತ್ತುಕೊಂಡು ಪರಾರಿಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಪ್ರಕರಣಗಳಿಗೆ ಸಂಭಂದಿಸಿದಂತೆ ಇಬ್ಬರು ಆರೋಪಿಗಳಾದ ಪ್ರವೀಣ್ , 29 ವರ್ಷ, ಹರಿಹರ ನಗರ ಹಾಗೂ ಅನಿಲ್ ಕುಮಾರ್ , 28 ವರ್ಷ, ಹರಿಹರ ತಾ. ಬನ್ನಿಕೊಡು ಗ್ರಾಮ ಇವರುಗಳನ್ನು ಬಂಧನ ಮಾಡಿದ್ದು, ಆರೋಪಿತರಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್ ಹಾಗೂ ದೂರುದಾರರಿಂದ ಕಿತ್ತುಕೊಂಡ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಪಿ ಎಸ್ ಐಗಳಾದ ಅರವಿಂದ ಬಿ.ಎಸ್. ಮತ್ತು ಅಬ್ದುಲ್ ಖಾದರ ಜಿಲಾನಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.