ದಾವಣಗೆರೆ: ನಿದ್ದೆ ಮಾತ್ರೆಯನ್ನು ನೀಡಲು ನಿರಾಕರಿಸಿದಕ್ಕೆ ಸಿಟಿಗೆದ್ದ ಯುವಕನೋರ್ವ ಮೆಡಿಕಲ್ ಶಾಪ್ ಗ್ಲಾಸ್ ಒಡೆದು ಶಾಪ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದಿದೆ.
ಇಕ್ರಾ ಮೆಡಿಕಲ್ ಶಾಪ್ಗೆ ಬಂದ ಯುವಕ ವೈದ್ಯರ ಚೀಟಿ ತೋರಿಸದೆ ನಿದ್ದೆ ಮಾತ್ರ ಕೇಳಿದ್ದ. ವೈದ್ಯರ ಚೀಟಿ ಇಲ್ಲದೆ ನಿದ್ದೆ ಮಾತ್ರೆ ನೀಡಲ್ಲ ಎಂದು ಮೆಡಿಕಲ್ ಶಾಪ್ ಮಾಲೀಕ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕ ಹತ್ತೇ ನಿಮಿಷದಲ್ಲಿ ಇಡೀ ಮೆಡಿಕಲ್ ಶಾಪ್ನ ಗ್ಲಾಸ್ ಒಡೆದು ಹಾಕಿದ್ದಾನೆ. ಬಳಿಕ ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಮೇಲೆ ಹಲ್ಲೆ ಮಾಡಿದ್ದಾನೆ. ಹ್ಲಲೆ ಮಾಡಿದ ನಂತರ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳೀಯರು ಯುವಕನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಅಮಾನುದ್ದೀನ್ ಹಲ್ಲೆಗೊಳಗಾದ ವ್ಯಕ್ತಿ. ಹರಿಹರ ನಗರ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.



