Connect with us

Dvgsuddi Kannada | online news portal | Kannada news online

ದಾವಣಗೆರೆ: ಪವನ್ ಜ್ಯೂಯಲರ್ಸ್ ಶೆಟರ್ಸ್ ಲಾಕ್ ಮುರಿದು ಕಳ್ಳತನ ಮಾಡಿದ್ದ ಆರೋಪಿ ವಶ; 18 ಲಕ್ಷ ಮೌಲ್ಯದ 48 ಕೆಜಿ ಬೆಳ್ಳಿ ಗಟ್ಟಿ ವಶ

IMG 20230929 201928

ದಾವಣಗೆರೆ

ದಾವಣಗೆರೆ: ಪವನ್ ಜ್ಯೂಯಲರ್ಸ್ ಶೆಟರ್ಸ್ ಲಾಕ್ ಮುರಿದು ಕಳ್ಳತನ ಮಾಡಿದ್ದ ಆರೋಪಿ ವಶ; 18 ಲಕ್ಷ ಮೌಲ್ಯದ 48 ಕೆಜಿ ಬೆಳ್ಳಿ ಗಟ್ಟಿ ವಶ

ದಾವಣಗೆರೆ: ಪವನ್ ಜ್ಯೂಯಲರ್ಸ್ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಕಳ್ಳತನ ಮಾಡಿದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 18 ಲಕ್ಷ ಮೌಲ್ಯದ 48‌‌‌ ಕೆಜಿ ಬೆಳ್ಳಿ ಗಟ್ಟಿ ವಶಕ್ಕೆ ಪಡೆದಿದ್ದಾರೆ.

ನಗರದ ವಿಜಯಲಕ್ಷ್ಮೀ ರಸ್ತೆಯ ಪವನ್ ಜ್ಯೂಯಲರ್ಸ್ ಮಾಲೀಕ ಕಿಶೋರ್ ಕುಮಾರ್ ಕೆ.ಟಿ ಅವರು, ಸೆ.09 ರಂದು ಯಾರೋ ಕಳ್ಳರು ತಮ್ಮ ಅಂಗಡಿಯ ಶೆಟರ್ಸ ಲಾಕ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ ಮತ್ತು 25,000- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕಾರ ಪ್ರಕರಣ ದಾಖಲಿಸಿದ್ದರು.

ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲು ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಹೆಚ್. ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ ಐ ಜಿ.ನಾಗರಾಜ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಆರೋಪಿ ಮತ್ತು ಮಾಲಿನ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿತ್ತು.

ಈ ತಂಡವು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತರು ಹಾಗೂ ಸ್ವತ್ತಿನ ಪತ್ತೆ ಕಾರ್ಯ ಕೈಗೊಂಡಿದ್ದು, ವಿವಿಧ ಕಡೆ ಮಾಹಿತಿಯನ್ನು ಕಲೆಹಾಕಿ ಭಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಮೇಲ್ಕಂಡ ಪ್ರಕರಣ ಆರೋಪಿತನಾದ ಜೀಬನ್ ಸಿಂಗ್ @ ಶಂಕರ್ ಸಿಂಗ್, ಸುಮಾರು 55 ವರ್ಷ, ಬಬಲಾದ ಗ್ರಾಮ, ಕಲಬುರಗಿ ಜಿಲ್ಲೆ, (ಸ್ವಂತ ಊರು: ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ) ಈತನನ್ನು ಬಂಧಿಸಲಾಗಿದೆ.

ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ದಾವಣಗೆರೆ ನಗರದಲ್ಲಿನ ಪವನ್ ಜ್ಯೂಯೆಲರ್ಸ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಅಂಗಡಿಯಲ್ಲಿನ ಪೂಜಾ ಸಾಮಾನುಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡು ಕಳ್ಳತನ ಮಾಡಿದ ಎಲ್ಲಾ ಬೆಳ್ಳಿಯ ವಸ್ತುಗಳನ್ನು ರಾಣೆಬೇನ್ನೂರು ನಗರದ ಎಂ.ಜಿ ರಸ್ತೆಯಲ್ಲಿರುವ ಬೆಳ್ಳಿ-ಬಂಗಾರದ ಅಂಗಡಿಯೊಂದರ ಮಾಲೀಕನಿಗೆ ಮಾರಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ.

ಕಳ್ಳತನವಾದ ಮಾಲನ್ನು ಸ್ವೀಕರಿಸಿ ಬೆಳ್ಳಿಯನ್ನು ಕರಗಿಸಿದ ವ್ಯಕ್ತಿಯಿಂದ ಮೇಲ್ಕಂಡ ಪ್ರಕರಣಕ್ದ ಅಂದಾಜು 18 ಲಕ್ಷ ರೂ ಮೌಲ್ಯದ ಒಟ್ಟು48 ಕೆ.ಜಿ 130 ಗ್ರಾಂ ಕಚ್ಚಾ ಬೆಳ್ಳಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಂಡಿರುತ್ತಾರೆ. ಪ್ರರಕಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ , ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top