ದಾವಣಗೆರೆ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 22 ಜನ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 1,35,020 ರೂ. ನಗದು ಹಣ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ರೈಲ್ವೆ ಬ್ರಿಡ್ಜ್ ಕೆಳಗೆ ಅಕ್ರಮವಾಗಿ ಜೂಜಾಟ ಆಡುತ್ತಿರುವ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಅರವಿಂದ್ ಬಿ ಎಸ್ ಅವರಿಗೆ ಬಂದ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆದಿದೆ.
ಪೊಲೀಸ್ ಉಪಾಧೀಕ್ಷಕ ಬಿ. ಎಸ್. ಬಸವರಾಜ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ಸಗರಿ ಮಾರ್ಗದರ್ಶನದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ಅರವಿಂದ ಬಿ.ಎಸ್. ಮತ್ತು ಅಬ್ದುಲ್ ಖಾದರ ಜಿಲಾನಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಮಚಂದ್ರಪ್ಪ ಎ ಎಸ್ ಐ, ಶ್ರೀನಿವಾಸ್, ಬಣಕಾರ್ ಶ್ರೀಧರ್, ಅನಿಲ್ ಕುಮಾರ ನಾಯ್ಕ್, ಗಂಗಾಧರ ಬಿ ಎನ್,ರಮೇಶ್ ಡಿ ಬಿ, ನವೀನ್ , ಸಿದ್ದಪ್ಪ, ಅರ್ಜುನ್ ನಂಧ್ಯಾಲ ಅವರನ್ನೊಳಗೊಂಡ ತಂಡ ಜೂಜಾಟದಲ್ಲಿ ತೊಡಗಿದ್ದ 22 ಜನ ಆರೋಪಿತರನ್ನು ದಸ್ತಗಿರಿ ಮಾಡಿದೆ. ಆರೋಪಿಗಳಿಂದ ಜೂಜಾಟದಲ್ಲಿ ತೊಡಗಿದ್ದ ಒಟ್ಟು 1,35,020 ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಸೆ. 20 ರಿಂದ ಮುಂದಿನ 3 ತಿಂಗಳ ಡಿಎಲ್ ಸ್ಲಾಟ್ ಓಪನ್; ಬೇಕಾದ ದಿನಾಂಕ ಇಂದೇ ಕಾಯ್ದಿರಿಸಿಕೊಳ್ಳಿ…!
ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಸೆ.21ರಂದು ಉದ್ಯೋಗ ಮೇಳ



