ದಾವಣಗೆರೆ: 15 ಕಡೆ ಭಾರೀ ಸ್ಫೋಟಕ ಪತ್ತೆ;ಯಾಗಿದ್ದು, ಕಾಡುಪ್ರಾಣಿ ಬೇಟೆಗಿಟ್ಟಿದ್ದ ಸ್ಫೋಟಕವನ್ನು ಅರಣ್ಯ ಇಲಾಖೆ ತಜ್ಞರ ತಂಡ ವಶಪಡಿಸಿಕೊಂಡಿದೆ.ಜಿಲ್ಲೆಯ ಜಗಳೂರು ತಾಲೂಕಿನ ರಂಗಯ್ಯದುರ್ಗ ಅರಣ್ಯ ಪ್ರದೇಶದ ಸುತ್ತಮುತ್ತ 15 ಕಡೆ ಕಾಡುಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ ಸ್ಫೋಟಕ ಪತ್ತೆಯಾಗಿದೆ. ಈ ಬಗ್ಗೆ ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಯಿಂದ ಅರಣ್ಯ ಇಲಾಖೆಯ ಪರಿಣಿತರ ತಂಡ ಕರೆಸಿ ಸ್ಫೋಟಕ ವಶಪಡಿಸಿಕೊಳ್ಳಲಾಗಿದೆ.
ರೈತರ ಜಮೀನು ಗಳಲ್ಲಿಯೂ ಸ್ಪೋಟಕಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ಸ್ಫೋಟಕ ಇಟ್ಟು ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿದ್ದರು. ಅಧಿಕಾರಿಗಳು ಮೀನಗಾರನಹಳ್ಳಿ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



