ದಾವಣಗೆರೆ: ಪ್ರತ್ಯೇಕ ಎರಡು ಪ್ರಕರಣದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಬಾಲಕ ಮತ್ತು ಗ್ರಾಮ್ ಒನ್ ಕಚೇರಿಯಲ್ಲಿ ಕಳವು ಮಾಡಿದ ಪ್ರಕರಣ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.ಬೈಕ್ ಕಳ್ಳತನ ಪ್ರಕರಣಗಳು ದಾಖಲುಸಿಕೊಂಡು ಆರೋಪಿತರ ಪತ್ತೆ ಕಾರ್ಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ.ಬಸರಗಿ ಹಾಗೂ ಡಿವೈಎಸ್ಪಿ ಡಾ.ಸಂತೋಷ್ ಕೆ.ಎಂ. ಮಾರ್ಗದರ್ಶನದಲ್ಲಿ ಸಿ.ಪಿ.ಐ. ಲಿಂಗನಗೌಡ ನೆಗಳೂರು ಮತ್ತು ಪಿಎಸ್ ಐ ವೀಣಾ ಹೆಚ್.ಕೆ , ಭಾರತಿ ಜೆ,ಇ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಬೈಕ ಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು, ಬಾಲ ಮಂದಿರ ವಶಕ್ಕೆ ಬಿಡಲಾಗಿರುತ್ತದೆ. ಸದರಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಂದ 02 ಬೈಕ್ (ಒಟ್ಟು ಅಂದಾಜು ಮೌಲ್ಯ 50,000/-ರೂ)ನ್ನು ವಶಕ್ಕೆ ಪಡೆಯಲಾಗಿದೆ.
ಬಸವಾಪಟ್ಟಣಗ್ರಾಮ್ ಒನ್ ಕಚೇರಿಯಲ್ಲಿ ಕಳ್ಳತನದ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ 01) ಅಬ್ದುಲ್ ಖಾದರ್ ಜಿಲಾನಿ, 02) ಸಾಧಿಕ್, 03) ನಯಾಜ್ ಬಂಧಿಸಲಾಗಿದೆ.
ಆರೋಪಿಗಳಿಂದ 01 ಎಲ್.ಜಿ ಕಂಪನಿಯ ಮಾನಿಟರ್, ಒಂದು ಸಿ.ಪಿ.ಯು, ಒಂದು ಎಪ್ಲಾನ್ ಕಂಪನಿಯ ಪ್ರಿಂಟರ್, ಒಂದು ಲ್ಯಾಮಿನೇಷನ್ ಮಿಷಿನ್ ಇವುಗಳ ಒಟ್ಟು ಅಂದಾಜು ಮೊತ್ತ ಒಟ್ಟು 55,500/-ರೂ ಬೆಲೆ ಬಾಳುವ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಆಟೋವನ್ನು ವಶಕ್ಕೆ ಪಡೆದು ಕೊಳ್ಳಲಾಗಿರುತ್ತದೆ. ಈ ಪತ್ತೆ ಕಾರ್ಯಾದಲ್ಲಿ ಭಾಗವಹಿಸಿದ ತಂಡಕ್ಕೆ ಎಸ್ಪಿ ಅರುಣ್ ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.