ದಾವಣಗೆರೆ: ಹೊಂಚು ಹಾಕಿ ನಿಧಿ ಶೋಧ, ವಾಹನ ದರೋಡೆ ನಡೆಸುತ್ತಿದ್ದ 6 ಆರೋಪಿಗಳ ಬಂಧನ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಹೊಂಚು ಹಾಕಿ ತಡರಾತ್ರಿ ರಸ್ತೆಯಲ್ಲಿ ವಾಹನ ನಿಲ್ಲಿಸಿ ದರೋಡೆ ಹಾಗೂ ಪುರಾತನ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸುತ್ತಿದ್ದ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜು.23 ರಂದು ರಾತ್ರಿ ಜಗಳೂರು ಪೊಲೀಸ್‌ಠಾಣಾ ವ್ಯಾಪ್ತಿಯ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಿಎಸ್‌ಐ ಸಾಗರ್.ಎಸ್.ಡಿ & ಸಿಬ್ಬಂದಿಯವರು ಲಿಂಗಣ್ಣಹಳ್ಳಿ ರಸ್ತೆಯಲ್ಲಿ ಮಧ್ಯರಾತ್ರಿ ಬೆಳಗಿನಜಾವ 3.30ಕ್ಕೆ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ಒಂದು ಕಾರು ನಿಂತಿತ್ತು. ಆ ಕಾರಿನ ಮುಂದೆ ಇಬ್ಬರು ವ್ಯಕ್ತಿಗಳು ನಿಂತಿದ್ದು ಇದರಿಂದ ಪಿಎಸ್‌ಐ & ಸಿಬ್ಬಂದಿ‌ ಅನುಮಾನಗೊಂಡು, ಆ ಕಾರಿನ ಬಳಿಗೆ ಹೋಗುತ್ತಿದ್ದಂತೆ ಕಾರಿನ ಮುಂದೆ ನಿಂತಿದ್ದಿಬ್ಬರು ಪೊಲೀಸ್ ಜೀಪ್ ನೋಡಿ ಓಡಿಹೋಗಲು ಪ್ರಯತ್ನಿಸಿದರು. ಅವರನ್ನು ಸಿಬ್ಬಂದಿ ಬೆನ್ನುಹತ್ತಿ ಹಿಡಿದಿದ್ದಾರೆ. ಇನ್ನೂ ಪಿಎಸ್‌ಐ, ಜೀಪ್ ಚಾಲಕ ಕಾರಿನ ಬಳಿ ನಿಂತು ಕಾರಿನ ಡೋರ್ ತೆಗೆಯದಂತೆ ನೋಡಿಕೊಂಡಿದ್ದು, ನಂತರ ಬೆನ್ನಟ್ಟಿ ಹಿಡಿದುಕೊಂಡು ಬಂದ ವ್ಯಕ್ತಿಗಳನ್ನು ಮತ್ತು ಕಾರಿನಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಲಾಯಿತು.

ಬಂಧಿತ ಆರೋಪಿಗಳಾದ 1) ಕಲ್ಲೇಶಿ.ಪಿ, (48), ವಾಸ:ಜಗಳೂರುಟೌನ್, 2) ದಿವಾನ್‌ಸಾಬ್‌ಜಾವೀದ್, ವಾಸ:ಆಜಾದ್‌ನಗರ, ದಾವಣಗೆರೆ ನಗರ,
3) ಮಲ್ಲಿಕಾರ್ಜುನ@ಮಲ್ಲೇಶಿ, 30ವರ್ಷ, ಹುಬ್ಬಳ್ಳಿ, 4) ಹನುಮಂತ ಸೋಪಾನಿಪವಾರ್ 33ವರ್ಷ ವಾಸ: ಹುಬ್ಬಳ್ಳಿ, 5) ಅಮೀರ್‌ಖಾನ್‌ಪಠಾಣ್, 30ವರ್ಷ, ಹುಬ್ಬಳ್ಳಿ, 6) ಮುರ್ತಾಜಾಸಾಬ್@ಗೋಲಂದಾಜ್, 38ವರ್ಷ, ಇಳಕಲ್ ನಿವಾಸಿ ಆಗಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಲ್ಲಿ ಸ್ಥಳೀಯ ಒಬ್ಬನಿದ್ದು, ಉಳಿದ 5 ಜನರು ಪರ ಸ್ಥಳದವರಾಗಿದ್ದಾರೆ. ಇವರು ದರೋಡೆ ಮಾಡಲು ಹೊಂಚು ಹಾಕಿರುವಂತೆ ಕಂಡುಬಂದಿದ್ದರಿಂದ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಎ.ಎಸ್.ಪಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದು, ಆರೋಪಿತರು ರಸ್ತೆ ದರೋಡೆ ಹಾಗೂ ಪುರಾತನ ದೇವಸ್ಥಾನಗಳನ್ನು ಪತ್ತೆಮಾಡಿ ನಿಧಿಗಾಗಿ ಶೋಧನಡೆಸಿ ದರೋಡೆ ಮಾಡಲು ಬಂದಿದ್ದರು. ಬಿದರಕೆರೆ-ಸಂತೆ ಮುದ್ದಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ಬೇಡಿ ಆಂಜನೇಯಸ್ವಾಮಿ ಗುಡಿಯ ಮುಂಭಾಗದಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣನಮೂರ್ತಿಯನ್ನು ಕಿತ್ತು ಪಕ್ಕದಲ್ಲಿಟ್ಟು ನಿಧಿಗಾಗಿ ಶೋಧನೆ ಮಾಡಿರುವುದು ತಿಳಿದು ಬಂದಿದೆ. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿರುತ್ತದೆ.

ಆರೋಪಿತರಿಂದ 1) ಬಿಳಿ ಬಣ್ಣದ ಸ್ವಿಪ್ಟ್ ಡಿಸೈರ್‌ಕಾರ್ 2) ಕಟ್ಟಿಗೆ ಹಿಡಿಕೆ ಇರುವ ಒಂದು ಕಬ್ಬಿಣದ ಸುತ್ತಿಗೆ 3) ಒಂದುಜೊತೆ ಹ್ಯಾಂಡ್‌ಗ್ಲೌಸ್, 4) 1 ಕಟ್ಟಿಂಗ್ ಪ್ಲೇಯರ್, 5)2 ಕಬ್ಬಿಣದ ಪ್ಲಾಟ್‌ಚಿಸೆಲ್‌ಗಳು, 2
6) ಒಂದು ಸುರ್‌ಸುರ್‌ಬತ್ತಿ, 7)ಪ್ಲಾಸ್ಟಿಕ್ ಹಗ್ಗ, 8)ಒಂದು ಗುಟಕಾ ಕಂಪನಿಯ ಖಾಲಿಬ್ಯಾಗ್, 9) 2 ಪಾಕೇಟ್ ಕಾರದ ಪುಡಿ, 10) ೦3 ಮೊಬೈಲ್‌ಗಳು, 11) 2 ಸಾವಿರ ರೂ ನಗದುಹಣ, 12) ಟಾರ್ಚ್, 13) ರೇಡಿಯಂ ಕಟ್ಟರ್ ಚಾಕು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿತ ಭರತೇಶ್ ಎಂಬು ವ್ಯಕ್ತಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು, ಪತ್ತೆ ಕಾರ್ಯ ಮುಂದುವರೆದಿರುತ್ತದೆ. 6 ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಜಗಳೂರು ಪೊಲೀಸ್ ಠಾಣೆ ಪಿಐ ನಿವಾಸರಾವ್ ಎಂ, ಪಿಎಸ್ ಐ ಸಾಗರ್. ಎಸ್.ಡಿ ಸಿಬ್ಬಂದಿ ವರ್ಗದವರಾದ. ನಾಗಭೂಷಣ.ಆರ್, ಪಂಪಾನಾಯ್ಕ, ಬಸವಂತಪ್ಪ, ಮಾರೆಪ್ಪ, ಬಸವರಾಜ, ಜೀಪ್ ಚಾಲಕರಾದ ದಿನೇಶ್, ಚಂದ್ರಶೇಖರ್, ರಾಜಪ್ಪ, ನಾಗರಾಜ, ಗಿರೀಶ ರವರುಗಳನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *