ದಾವಣಗೆರೆ; ಪೊಲೀಸ್ ಇಲಾಖೆ ವತಿಯಿಂದ ಪ್ರಾಪರ್ಟಿ ರಿಟರ್ನ್ ಪೆರೇಡ್ ಹಿನ್ನೆಲೆ ನಗರದಲ್ಲಿ ಕಳುವಾದ 73 ಬೈಕ್, 2 ಕಾರು, ಒಂದು ಆಟೋ, 23.27 ಲಕ್ಷ ನಗದು, 8 ಮೊಬೈಲ್, 1 ಕುರಿ, 1008 ಗ್ರಾಂ ಚಿನ್ನ ಹಾಗೂ 598 ಗ್ರಾಂ ಬೆಳ್ಳಿ ವಸ್ತುಗಳನ್ನು ವಾರಸುದಾರಿಗೆ ಹಿಂತಿರುಗಿಸಲಾಯಿತು.
ದಾವಣಗೆರೆ ನಗರ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಿನಾಂಕ 01-01-2023 ರಿಂದ ಇಲ್ಲಿಯವರೆಗೆ ಕಳುವಾದ ಸ್ವತ್ತು ವಶಪಡಿಸಿಕೊಂಡಿದ್ದು, ಈ
ಸಂಬಂಧ ದಾವಣಗೆರೆ ಡಿ.ಎ.ಆರ್ ಕವಾಯತ್ತು ಮೈದಾನದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಸ್ವತ್ತುಗಾಲನ್ನು ಅವುಗಳ ವಾರಸುದಾರರಿಗೆ ಹಿಂದಿರುಗಿಸಲಾಯಿತು. ಕೆಟಿಜೆ ನಗರ 7, ಬಸವನಗರ 12, ವಿದ್ಯಾನಗರ 19, ಆಜಾದ್ ನಗರ 2, ಗಾಂಧಿನಗರ 5 , ಆರ್ ಎಂಸಿ ಯಾರ್ಡ್ 1, ಬಡಾವಣೆ ಪೊಲೀಸ್ ಠಾಣೆಯ 39 ಸೇರಿ ಒಟ್ಟು 85 ಪ್ರಕರಣಗಳ ವಾರಸುದಾರಿಗೆ ಕಳವಾಸ ಸ್ವತ್ತು ಹಿಂತಿರುಗಿಸಲಾಯಿತು.
ಪ್ರಾಪರ್ಟಿ ರಿಟರ್ನ ಪೆರೇಡ್ ಅನ್ನು ಹೆಚ್ಚುವರಿ ಎಸ್ಪಿ
ರಾಮಗೊಂಡ ಬಿ ಬಸರಗಿ ನಡೆಸಿಕೊಟ್ಟಿದ್ದು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಬಿ.ಎಸ್. ಬಸವರಾಜ್ , ಯಶವಂತ್ ಸಿಪಿಐ ಅನಿಲ್ ಆರ್.ಪಿ, ಪಿಐಗಳಾದ ಧನಂಜಯ, ಶಶಿಧರ್ ಯು,.ಜೆ, ಇಮ್ರಾನ್ ಬೇಗ್, ಗುರುಬಸವರಾಜ್ , ಪಿ.ಎಸ್.ಐಗಳಾದ ಅಂಜಿನಪ್ಪ, ಅಕ್ಟರ್ ಮುಲ್ಲಾ, ರೇಣುಕ ಜಿಎಂ, ಪುಷ್ಪಲತಾ, ಪ್ರಮೀಳಮ್ಮ, ನಿಂಗಮ್ಮ, ಶಮೀಮ್, ಉನ್ನೀಸಾ, ಹಾಗೂ ದಾವಣಗೆರೆ ನಗರ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



