ದಾವಣಗೆರೆ: ದಾವಣಗೆರೆ, ಹರಿಹರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದು, ಆರೋಪಿಗಳಿಂದ 4 ಬೈಕ್ ವಶಕ್ಕೆ ಪಡೆಯಲಾಗಿದೆ.
ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಡಿವೈಎಸ್ ಪಿ ಕನ್ನಿಕಾ ಸಕ್ರಿವಾಲ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ನಿರೀಕ್ಷಕ ದೇವಾನಂದ ಎಸ್ ನೇತೃತ್ವದಲ್ಲಿ ಪಿ.ಎಸ್.ಐ ಚಿದಾನಂದಪ್ಪ ಎಸ್ ಬಿ ಹಾಗೂ ಸಿಬ್ಬಂದಿಯವರಾದ ಮಂಜುನಾಥ.ಬಿ.ವಿ , ದೇವರಾಜ್ ಸೂರ್ವೆ, ಮಂಜುನಾಥ ಕ್ಯಾತಮ್ಮನವರ್, ಹನುಮಂತ ಗೋಪನಾಳ ಅವರನ್ನೊಳಗೊಂಡ ತಂಡವು ಬೈಕ್ ಕಳ್ಳತನದ ಆರೋಪಿತರಾದ ಹರಿಹರದ ಕಾಳಿದಾಸ ನಗರದ ಟೈಲ್ಸ್ ಕೆಲಸಗಾರರಾದ 1] ಮಂಜುನಾಥ.ಎನ್.ಕೆ (28) , ವಿರೇಶ.ಎಂ (30) ಬಂಧಿಸಲಾಗಿದೆ.
ಹರಿಹರ ನಗರ ಠಾಣೆ ಹಾಗೂ ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿದ್ದ ಒಟ್ಟು 04 ಬೈಕ್ ಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ತಂಡವನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



