ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 3.61 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಬಸವರಾಜ ಬಿ.ಎಸ್ ಅವರು ಖಚಿತ ಮೇರೆಗೆ ಚನ್ನಗಿರಿ ಡಿವೈಎಸ್ಪಿ ಡಾ. ಕೆ.ಎಂ. ಸಂತೋಷ್, ನಿರೀಕ್ಷಕ ಪಿ. ಬಿ. ಮಧು ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಡಿ.ಸಿ.ಆರ್.ಬಿ. ಘಟಕದ ಸಿಬ್ಬಂದಿ ಹಾಗೂ ಚನ್ನಗಿರಿ ಠಾಣಾ ಸಿಬ್ಬಂದಿ ಪಾಂಡೋಮಟ್ಟಿ ಗ್ರಾಮದಲ್ಲಿ ದಾಳಿ ಮಾಡಿ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ 1) ಎಂ. ಬಿ. ರವಿಕುಮಾರ್,47 ವರ್ಷ, ವಾಸ: ಪಾಂಡೋಮಟ್ಟಿ ಗ್ರಾಮ 2) ತಿಪ್ಪೇಶ, 43 ವರ್ಷ, ವಾಸ: ಪಾಂಡೋಮಟ್ಟಿ ಗ್ರಾಮ. ಇವರನ್ನು ವಶಕ್ಕೆ ಪಡೆದುಕೊಂಡು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯ ವಶಪಡಿಸಿಕೊಳ್ಳಲಾಗುದೆ.
- ವಶಪಡಿಸಿಕೊಂಡ ಮದ್ಯ ವಿವರ
- ಓಲ್ಡ್ ಟೆವರೆನ್ 180 ಎಂ.ಎಲ್ 12 ಬಾಕ್ಸ್
- ಮ್ಯಾಕ್ ಡೋವೇಲ್ಸ್ ಹೆಸರಿನ 90 ಎಂಎಲ್ 4 ಬಾಕ್ಸ್
ರಾಜ ವಿಸ್ಕಿ ಹೆಸರಿನ 90 ಎಂ ಎಲ್ 42 ಬಾಕ್ಸ್ - ಟುಬರ್ಗ ಹೆಸರಿನ 650 ಎಂ ಎಲ್ 10 ಬೀಯರ್ ಬಾಕ್ಸ್
- ಕಿಂಗ್ ಫಿಷರ್ ಹೆಸರಿನ 650 ಎಂ ಎಲ್12 ಬೀಯರ್ ಬಾಕ್ಸ್
- ಕಿಂಗ್ ಫಿಷರ್ ಹೆಸರಿನ 500ಎಂ ಎಲ್ 5 ಬೀಯರ್ ಬಾಕ್ಸ್
ಕಿಂಗ್ ಫಿಷರ್ ಹೆಸರಿನ 330 ಎಂ ಎಲ್ 4 ಬೀಯರ್ ಬಾಕ್ಸ್ - ಬ್ಯಾಗ ಪೈಪರ್ ಹೆಸರಿನ 180 ಎಂ ಎಲ್ 12 ಬಾಕ್ಸ್
- ಒಂದು ಓಮಿನಿ ವಾಹನ
ಒಟ್ಟಾರೆಯಾಗಿ 868.02 ಲೀಟರ್ ಮದ್ಯ ಇದ್ದು ಒಟ್ಟಾರೆ ಮೇಲ್ಕಂಡ ಮದ್ಯದ ಟೇಟ್ರಾ ಪ್ಯಾಕ್ ಮತ್ತು ಬೀಯರ್ ಬಾಟಲ್ ಮತ್ತು ಬೀಯರ್ ಟಿನ್ ಗಳ ಬೆಲೆ 03,61,662/- ರೂಪಾಯಿಗಳಾಗಿರುತ್ತವೆ. ಈ ಕಾರ್ಯಾಚರಣೆಗೆ ಎಸ್ಪಿ ಡಾ. ಅರುಣ್ ಕೆ ಶ್ಲಾಘಿಸಿದ್ದಾರೆ.