ದಾವಣಗೆರೆ: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 2.80 ಲಕ್ಷ ಮೌಲ್ಯದ 20 ಮೊಬೈಲ್ ಪೋನ್‌ಗಳನ್ನು ಪತ್ತೆ ಮಾಡಿ ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ.
CEIR PORTAL ನಲ್ಲಿ ಮೊಬೈಲ್ ವಾರಸುದಾರರ ವಿವರಗಳನ್ನು ನಮೂದು ಮಾಡಿ ಮೊಬೈಲ್ IMEI ನಂಬರನ್ನು ಬ್ಲಾಕ್ ಮಾಡುವ ಮುಖಾಂತರ ಕಳೆದುಹೋದ ಮೊಬೈಲ್‌ಗಳ ಪೈಕಿ 20 ಮೊಬೈಲ್‌ಗಳನ್ನು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪತ್ತೆ ಮಾಡಿದ್ದಾರೆ. ಮೊಬೈಲ್ ವಾರಸುದಾರರಾದ 01]ಚಂದನ
ಎನ್,ಎಸ್ 02]ಈರಪ್ಪ ಎನ್,ಬಿ, 03] ಶ್ರೀ ಚಂದ್ರಶೇಖರ, 4] ಅಶಫಕ್, 5] ಅಲ್ಲಾಭಕ್ಷೀ, 6] ಅಲ್ಲಾಭಕ್ಷಿ ಎಮ್, 7] ವೆಂಕಟೇಶಪ್ಪ ಕೆ 8] ಸಂತೋಷ, 9] ಗುಹೇಶ್ವರ ಜೆ,ಎಸ್, 10] ಮಹಮ್ಮದ್ ಇಬ್ರಾಹಿಂ, 11] ಚಂದ್ರಪ್ಪ, 12] ಮಂಜುನಾಥ ಎಮ್.ಎಸ್ 13] ನಾಗರಾಜ, 14] ಸಂಪತ್ತಕುಮಾರ, 15] ಪಿ.ಸಿ.ಜಗದೀಶ್
ಕುಮಾರ, 16] ನಾಗರಾಜ ಎಮ್, 17] ಭಾಗ್ಯ, 18] ರಾಹುಲ್ ಪಿ.ಎಸ್, 19] ಮಂಜುನಾಥ ಪಿ, 20] ಹರೀಶ್
ಎ ಇವರಿಗೆ ವಾಪಾಸ್ಸುಹಿಂದಿರುಗಿಸಲಾಗಿದೆ. ಪತ್ತೆಯಾದ ಮೊಬೈಲ್‌ಗಳ ಅಂದಾಜು ಮೊತ್ತ 2,80,000/-ರೂಗಳು ಆಗಿರುತ್ತದೆ.
ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಪ್ರಭಾವತಿ ಸಿ ಶೇತಸನದಿ, ಪಿಎಸ್ ಐ ರೇಣುಕಾ ಜಿ.ಎಮ್ ಹಾಗೂ ಸಿಬ್ಬಂದಿಯಾದ ನಾಗರಾಜ, ಕೂಲೇರ,ರಾಘವೇಂದ್ರ, ಶಾಂತರಾಜ್ ತಂಡದಲ್ಲಿದ್ದರು. ಈ ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



