ದಾವಣಗೆರೆ: ಮದುವೆ ಕಾರ್ಡ್ ಕೊಡುವ ನೆಪದಲ್ಲಿ ಮನೆ ಒಳಗೆ ಬಂದು ವೃದ್ಧೆಯ ಕೊರಳಿನ ಬಂಗಾರದ ಸರ ಕಳ್ಳತನಕ್ಕೆ ಯತ್ನಿಸಿ, ವೃದ್ಧೆ ಜೋರಾಗಿ ಕೂಗಿದ್ದರಿಂದ ಮೊಬೈಲ್ ಕಳ್ಳತನ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬೈಕ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.28 ರಂದು ನಾಗರತ್ನಮ್ಮ ಎಂಬುವವರು ಮನೆಯ ಮುಂದಿನ ಬಾಗಿಲನ್ನು ಮುಂದಕ್ಕೆ ಬಿಟ್ಟುಕೊಂಡು, ಟಿವಿ ನೋಡುತ್ತಿದ್ದಾಗ ಕುಳಿತಿದ್ದರು. ಯಾರೋ ಒಬ್ಬ ಒಬ್ಬ ಮನೆಯ ಬಾಗಿಲ ಒಳಗೆ ಬಂದು ನನ್ನ ಮದುವೆ ಫಿಕ್ಸ್ ಆಗಿರುತ್ತದೆ. ವೆಡ್ಡಿಂಗ್ ಕಾರ್ಡ್ ನೀಡಲು ಬಂದಿರುವುದಾಗಿ ಹೇಳಿ ಅವರ ಬಾಯಿಯನ್ನು ಮುಚ್ಚಿ ಕೊರಳಿನಲ್ಲಿದ ಬಂಗಾರದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ವೃದ್ಧೆ ಜೋರಾಗಿ ಕೂಗಿಕೊಂಡಾಗ ಪಕ್ಕದಲ್ಲಿದ ಮೊಬೈಲ್ ಕಳ್ಳತನ ಮಾಡಿಕೊಂಡು ಓಡಿ ಹೋಗಿದ್ದಾರೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಗಳ ಆರೋಪಿಗಳು ಮತ್ತು ಮಾಲು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ. ರಾಮಗೊಂಡ ಬಸರಗಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು ಜೆ ನೇತೃತ್ವದ ತಂಡವು ಆರೋಪಿಗಳಾದ ಮಂಜುನಾಥ ಭಜಂತ್ರಿ @ ಮಂಜ, ರಾಮನಗರ, ದಾವಣಗೆರೆ ಸ್ವಂತ ಊರು ಗುಳೇದಗುಡ್ಡ ಟೌನ್, ಬಾಗಲಕೋಟೆ ಜಿಲ್ಲೆ.
ಹಾಗೂ ಮಂಜುನಾಥ ಪಿ, ರಾಮನಗರ, ದಾವಣಗೆರೆ ಇವರುಗಳನ್ನು ಬಂದಿಸಿದ್ದಾರೆ. ಆರೋಪಿಗಳಿಂದ ಒಂದು ಮೊಬೈಲ್ & ಕೃತ್ಯಕ್ಕೆ ಬಳಸಿದ ಹೊಂಡಾ 125 ಬೈಕನ್ನು ಅಮಾನತ್ತು ಮಾಡಲಾಗಿದೆ. ಪತ್ತೆ ಕಾರ್ಯ ಮಾಡಿದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ||. ಅರುಣ್ ಕೆ ಐಪಿಎಸ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.