ದಾವಣಗೆರೆ; ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜಗಳೂರು ತಾಲ್ಲೂಕು ಬಸವನಕೋಟೆ ಗ್ರಾಮದ ಕಣವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 25 ಲೋಡ್, ಹೊನ್ನಾಳಿ ತಾಲ್ಲೂಕು ಬುಳ್ಳಾಪುರಗ್ರಾಮದಲ್ಲಿ ತಂಗಭದ್ರಾ ನದಿ ದಂಡೆಯ ಮೇಲೆ ನದಿಯಿಂದ ಯಾವುದೇ ಪರವಾನಗಿ ಪಡೆಯದೆ ತಂಡ ಸುಮಾರು 25 ಟಿಪ್ಪರ್ ಲಾರಿ ಮರಳನ್ನು ಅಕ್ರಮವಾಗ ಸಂಗ್ರಹ ಮಾಡಿಟ್ಟಿರುವುದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಡಲಾಗಿದ್ದ 40-50 ಟಿಪ್ಪರ್ ಲಾರಿ ಮರಳು ಹಾಗೂ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕ್ರಮವಾಗಿ ಸಂಗ್ರಹಿಸಿಟ್ಟಿದ್ದ 10-15
ಟ್ರ್ಯಾಕ್ಟರ್ ಲೋಡ್ಗಳನ್ನು ಮರಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಸ್ವೆಹಳ್ಳಿ ಗ್ರಾಮದಲ್ಲೂ ಸಹ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 4-5 ಟಿಪ್ಪರ್ ಲಾರಿ ಮರಳನ್ನು ವಶಪಡಿಸಿಕೊಳ್ಳಲಾಗಿದೆ.



