ದಾವಣಗೆರೆ: ಕಂಪನಿಗಳಿಗೆ ಬಾಡಿಗೆ ಬಿಡುವುದಾಗಿ ಮಾಲೀಕರಿಂದ ಕಾರು ಪಡೆದು, ಆ ಕಾರಗಳನ್ನು ಬೇರೆಯವರಿಗೆ ಒತ್ತೆ ಇಟ್ಟು ಹಣ ಪಡೆಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1.06 ಕೋಟಿ ಮೌಲ್ಯದ 15 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಎ2 ಆರೋಪಿತನನ್ನು ಬಂಧಿಸಿ, ಆರೋಪಿತನಿಂದ ಒಟ್ಟು 1.06 ಕೋಟಿ ರೂ ಮೌಲ್ಯದ 15 ವಿವಿಧ ಕಂಪನಿಯ ಕಾರುಗಳನ್ನು ವಶ ಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಂತರಾಜ ತನ್ನ ಕೆಎ17-Z-9330 ನಂಬರಿನ ಬಿಳಿ ಬಣ್ಣದ ಸ್ವೀಪ್ಟ್ ಕಾರನ್ನು ಅರ್ಜುನ ಹಾಗೂ ಇತರರು ಕಂಪನಿಗೆ ಬಾಡಿಗೆ ಬಿಡುವ ನೆಪದಲ್ಲಿ ತೆಗೆದುಕೊಂಡು ಹೋಗಿ ಕಾರನ್ನು ಬೇರೆಯವರಿಗೆ ಒತ್ತೆ ಇಟ್ಟು ಹಣ ಪಡೆದಿರುತ್ತಾರೆ. ಇದೇ ರೀತಿ 15 ರಿಂದ 20 ಜನರ ಕಾರುಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದಾರೆ.ಈ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ ಪಿ ನರಸಿಂಹ ತಾಮ್ರದ್ವಜ ಮತ್ತು ಕೆಟಿಜೆ ನಗರ ವೃತ್ತ ನಿರೀಕ್ಷಕ ಹೆಚ್ ಗುರುಬಸವರಾಜ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ, ಶ ಅಬ್ದುಲ್ ಖಾದರ್ ಜಿಲಾನಿ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾಧವ್, ಪ್ರಕಾಶ ಟಿ, ಷಣ್ಮುಖ, ಎಮ್ ಮಂಜಪ್ಪ, ಗಿರೀಶ ಗೌಡ, ರಾಘವೇಂದ್ರ, ಶಾಂತಕುಮಾರ ರವರನ್ನೋಳಗೊಂಡ ತಂಡ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ಒಟ್ಟು1.06 ಕೋಟಿ ರೂ ಮೌಲ್ಯದ 15 ಕಾರುಗಳನ್ನು ವಶ ಪಡೆಯಲಾಗಿದೆ.